HomePage_Banner
HomePage_Banner
HomePage_Banner
HomePage_Banner

ಬೊಳುವಾರು ವೈದೇಹಿ, ವೈಷ್ಣವಿ ಮಹಿಳಾ ಭಜನಾ ಮಂಡಳಿ ವಾರ್ಷಿಕೋತ್ಸವ | ಕನಕ ಜಯಂತಿ ಆಚರಣೆ – ಕೊರೋನಾ ಮುಕ್ತಕ್ಕೆ ಧ್ವನಂತರಿ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹಿಂದೂ ಧರ್ಮದ ಸ್ಥಾನವನ್ನು ಜನರಿಗೆ ತಿಳಿಸುವುದು ಭಜನೆ – ಮುರಳಿಕೃಷ್ಣ ಹಸಂತಡ್ಕ
  • ನಮ್ಮಲ್ಲಿ ನಾವು ದೇವರನ್ನು ಕಾಣಲು ಸಾಧ್ಯ – ವಿದ್ಯಾ ಆರ್ ಗೌರಿ

ಪುತ್ತೂರು: ಬೊಳುವಾರು ವೈದೇಹಿ ಮತ್ತು ವೈಷ್ಣವಿ ಮಹಿಳಾ ಭಜನಾ ಮಂಡಳಿ ಹಾಗು ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್‌ನ ೮ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನಕ ಜಯಂತಿ ಆಚರಣೆಯು ಡಿ.೪ರಂದು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ವಿಶೇಷ ಎಂದರೆ ಸಂಕಷ್ಟ ತಂದಿಟ್ಟ ಕೊರೋನಾ ಮಹಾಮಾರಿಯಿಂದ ಲೋಕಕಲ್ಯಾಣಾರ್ಥವಾಗಿ ಧನ್ವಂತರಿ ಪೂಜೆ ಮತ್ತು ಸಾಮೂಹಿಕ ಧನ್ವಂತರಿ ವಿಷ್ಣು ಸಹಸ್ರನಾಮ ಮಾಡಲಾಯಿತು.

ಬೆಳಿಗ್ಗೆ ವೇ ಮೂ ಹರಿಪ್ರಸಾದ್ ವೈಲಾಯ ಅವರ ನೇತೃತ್ವದಲ್ಲಿ ಶ್ರೀ ಧನ್ವಂತರಿ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ವೈದೇಹಿ ಮತ್ತು ವೈಷ್ಣವಿ ಭಜನಾ ಮಂಡಳಿ ಸೇರಿದಂತೆ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರ ನೇತೃತ್ವದಲ್ಲಿ ಸಾಮೂಹಿಕವಾಗಿ ಶ್ರೀ ಧನ್ವಂತರಿ ವಿಷ್ಣುಸಹಸ್ರನಾಮ ಪಾರಾಯಣ, ಧನ್ವಂತರಿ ಸುಳಾದಿ, ಕನಕದಾಸ ಕೀರ್ತನೆ, ಸಾಮೂಹಿಕ ಮಹಾಪೂಜೆ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ಹಿಂದೂ ಧರ್ಮದ ಸ್ಥಾನವನ್ನು ಜನರಿಗೆ ತಿಳಿಸುವುದು ಭಜನೆ:
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ದೇವರ ಭಜನೆ ಎಲ್ಲರಿಗೂ ಸಲ್ಲುವಂತಹದ್ದು ಎಂಬ ಕಲ್ಪಣೆ ಕೊಡುವ ಮೂಲಕ ದಾಸರ ಭಕ್ತಿಪ್ರಧಾನ ಭಜನೆಗಳ ಮೂಲಕ ಹಿಂದೂ ಧರ್ಮದ ಸ್ಥಾನವನ್ನು ಜನರಿಗೆ ತಿಳಿಸುವ ಕೆಲಸ ಆಗುತ್ತಿದೆ. ಭಜನೆಯಿಂದ ಇವತ್ತು ಸಾಮಾಜಿಕ ಬದಲಾವಣೆ ಕಾಣುತ್ತಿದ್ದೇವೆ. ಜಗತ್ತು ಇವತ್ತು ಹಿಂದೂ ಧರ್ಮವನ್ನು ಒಪ್ಪಿಕೊಂಡು ಬರುತ್ತಿವೆ. ಯಾಕೆಂದರೆ ಭಜನೆ ಸಂಸ್ಕೃತಿಕ ಸಂಸ್ಕಾರವನ್ನು ಯಾವ ರೀತಿಯಲ್ಲಿ ಉಳಿಸಿಕೊಳ್ಳಬಹುದು ಎಂಬ ಕಲ್ಪನೆಯನ್ನು ತೋರಿಸಿ ಕೊಡುತ್ತಿದೆ. ಈ ನಿಟ್ಟಿನಲ್ಲಿ ಭಜನೆ ನಿರಂತರವಾಗಿ ಮನೆ ಮತ್ತು ಮನಗಳಲ್ಲಿ ಅರಳುತ್ತಾ ಹಿಂದೂ ಧರ್ಮದ ಸ್ಥಾನವನ್ನು ಮತ್ತೆ ಮತ್ತೆ ಜನರಿಗೆ ತಿಳಿಸುವ ಕೆಲಸದಲ್ಲಿ ವರ್ಷದ ೩೫೦ ದಿನಗಳಲ್ಲೂ ನಾವೆಲ್ಲ ತೊಡಗಿಸಿಕೊಳ್ಳೋಣ. ಸಣ್ಣ ಮಕ್ಕಳಿಗೆ ಯುವ ಪೀಳಿಗೆಗೆ ತಿದ್ದಿ ತೀಡಿ ಹೇಳುವ ಕೆಲಸ ನಾವೆಲ್ಲ ಮಾಡೋಣ ಎಂದು ಹೇಳಿದರು.

ನಮ್ಮಲ್ಲಿ ನಾವು ದೇವರನ್ನು ಕಾಣಲು ಸಾಧ್ಯ :
ಸಭಾ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ದೇವರ ನಾಮ ಸ್ಮರಿಸುತ್ತಾ ನಮ್ಮಲ್ಲಿ ನಾವು ದೇವರನ್ನು ಕಾಣಲು ಭಜನೆ ಪ್ರಮುಖ ಸಾಧನ. ಪುತ್ತೂರಿನಲ್ಲಿ ಭಜನಾ ತಂಡ ಇನ್ನಷ್ಟು ಜಾಸ್ತಿ ಆಗಬೇಕು ಎಂದು ಹೇಳಿದರು. ಧನ್ವಂತರಿ ಭಟ್ ಎಂದು ಖ್ಯಾತಿಯ ಸುಬ್ರಹ್ಮಣ್ಯ ಶಾಸ್ತ್ರೀಯವರು ಸಾಮೂಹಿಕ ಧನ್ವಂತರಿ ಪೂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯಂತೆ ಎಲ್ಲಾ ಕಡೆ ನಿರಂತರವಾಗಿ ನಡೆಯಲಿ ಎಂದು ಹೇಳಿದರು. ದಾಸ ಸಂಕೀರ್ತನಾಕಾರ ರಾಮಕೃಷ್ಣ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ- ಗುರುದಕ್ಷಿಣೆ:
ಕಾಟುಕುಕ್ಕೆ ಚಾರಿಟೇಬಲ್ ಟ್ರಸ್ಟ್ ಸದಸ್ಯರಾಗಿ ವಿವಿಧ ಕ್ಷೇತ್ರದಲ್ಲಿ ಆಯ್ಕೆಗೊಂಡಿರುವವರನ್ನು ಅಭಿನಂದಿಸಲಾಯಿತು. ಕೆಮ್ಮಿಂಜೆ ಶ್ರೀ ಮಹಾವಿಷ್ಣು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರೇಮಲತಾ ರಾವ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಪರಮೇಶ್ವರಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಸ್ವರ್ಣಲತಾ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಪ್ರೇಮಲತಾ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮಧ್ವಾಧೀಶ ವಿಠಲದಾಸ ಶ್ರೀ ರಾಮಕೃಷ್ಣ ಕಾಟುಕುಕ್ಕೆ ಅವರಿಗೆ ಗುರುದಕ್ಷಿಣೆ ನೀಡಿ ಗೌರವಿಸಲಾಯಿತು. ವೈದೇಹಿ ಭಜನಾ ಮಂಡಳಿಯ ಕಾರ್ಯದರ್ಶಿ ವತ್ಸಲಾರಾಜ್ಞಿ ವರದಿ ಮಂಡಿಸಿದರು. ಶಶಿಪ್ರಭಾ, ಸಂಜೀವಿ, ಇಂದಿರಾ, ಪ್ರೇಮ ಪ್ರಾರ್ಥಿಸಿದರು. ವೈಷ್ಣವಿ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಆರ್ ನಾಯಕ್ ಸ್ವಾಗತಿಸಿ, ವೈದೇಹಿ ಭಜನಾ ಮಂಡಳಿಯ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು. ಸುಮಂಗಲ ಶೆಣೈ ಮತ್ತು ಜಯಶ್ರೀ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಜನಾ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ಕಿಶೋರ್ ಪೆರ್ಲ ಮತ್ತು ತಬಳಾದಲ್ಲಿ ಸಾಯಿರಾಮ್ ಸಹಕರಿಸಿರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.