HomePage_Banner
HomePage_Banner
HomePage_Banner
HomePage_Banner

ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ `ಅವಳಿ ಪ್ರಶಸ್ತಿ’ಯ ಸಂಭ್ರಮ.. ಸತತ 7ನೇ ಬಾರಿಗೆ “ ಅತ್ಯುತ್ತಮ ಸಂಘ ” ಪ್ರಶಸ್ತಿಯೊಂದಿಗೆ ಸಂಘದ ಅಭೂತ ಪೂರ್ವ ಸಾಧನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸುಧಾಕರ ಆಚಾರ್ಯ ಕಾಣಿಯೂರು

  • ದ.ಕ ಹಾಲು ಒಕ್ಕೂಟದಿಂದ ಪುತ್ತೂರು, ಕಡಬ ತಾಲೂಕಿನ ಅತ್ಯುತ್ತಮ ಸಂಘ ಪ್ರಶಸ್ತಿಗೆ ಆಯ್ಕೆ
  • ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದಲೂ ಪ್ರಶಸ್ತಿಗೆ ಆಯ್ಕೆ

ಕಾಣಿಯೂರು: ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘವು ಸತತ ೭ನೇ ಬಾರಿಗೆ ಪ್ರಶಸ್ತಿಯ ಗರಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಚಾರ್ವಾಕ ಹಾಲು ಉತ್ಪಾದಕರ ಸಹಕಾರಿ ಸಂಘವು ಅಭೂತಪೂರ್ವ ಸಾಧನೆಯೊಂದಿಗೆ ಜಿಲ್ಲೆಯಲ್ಲಿಯೇ ವಿಶೇಷ ದಾಖಲೆ ಸೃಷ್ಟಿಸಿದೆ. ದ.ಕ ಹಾಲು ಒಕ್ಕೂಟದ ವತಿಯಿಂದ ಕೊಡಮಾಡುವ ತಾಲೂಕು ಮಟ್ಟದ ಪ್ರಶಸ್ತಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲಿಯೂ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು ಸತತ ಸಾಧನೆ ಮಾಡಿ ಇದೀಗ ಮತ್ತೊಮ್ಮೆ ೨೦೧೯- ೨೦೨೦ನೇ ಸಾಲಿನ ಅತ್ಯುತ್ತಮ ಸಂಘ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರುವ ಚಾರ್ವಾಕ ಹಾಲು ಉತ್ಪಾತ್ದಕರ ಸಹಕಾರ ಸಂಘವು  ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಕೊಡ ಮಾಡುವ ಪ್ರಶಸ್ತಿಗೂ ಭಾಜನವಾಗಿದೆ. ಸಂಘದ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಕಾರ್ಯ, ಸಂಘಕ್ಕೆ ಗುಣಮಟ್ಟದ ಹಾಲು ಪೂರೈಕೆ, ಸಂಘ ಹಾಗೂ ಕೃಷಿಕರಿಗೆ ಅತಿ ಅಗತ್ಯವಿರುವ ಯೋಜನೆಗಳ ಅನುಷ್ಠಾನ, ಇದೆಲ್ಲವನ್ನು ಪರಿಗಣಿಸಿ ಸಂಘಕ್ಕೆ ಹಲವಾರು ಪ್ರಶಸ್ತಿಗಳು ಸಂದಿದ್ದು, ಸಂಘದ ಕುರಿತು ಹೆಮ್ಮೆ ಪಡುವಂತಾಗಿದೆ. ಸಂಘ ಈ ಮಟ್ಟಕ್ಕೆ ಬೆಳೆಯಲು ಕಾರಣೀಭೂತರಾದ ಹಾಲು ಉತ್ಪಾದಕರಿಗೆ, ಜನಪ್ರತಿನಿಧಿಗಳಿಗೆ, ಸಹಕಾರವಿತ್ತ ವಿವಿಧ ಸಂಘ ಸಂಸ್ಥೆಗಳಿಗೆ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಗೂ, ದ.ಕ. ಹಾಲು ಒಕ್ಕೂಟದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ, ಸಮಸ್ತ ಊರಿನ ಬಂಧುಗಳನ್ನು ನೆನಪಿಸಿಕೊಳ್ಳುತ್ತಿದ್ದು, ಸಂಘದಿಂದ ಮನದಾಳದ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಾರೆ.

ಸಂಘದ ಆಡಳಿತ ಮಂಡಳಿ: ೨೦೧೯-೨೦ನೇ ಸಾಲಿನ ಸಂಘದ ಆಡಳಿತ ಮಂಡಳಿಯಲ್ಲಿ ಧನಂಜಯ ಕೇನಾಜೆ ಅಧ್ಯಕ್ಷರಾಗಿದ್ದು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಗೌಡ ಇಡ್ಯಡ್ಕ ಹಾಗೂ ನಿರ್ದೇಶಕರುಗಳಾಗಿ ಹರಿಯಪ್ಪ ಗೌಡ ಖಂಡಿಗ, ಸುಂದರ ಗೌಡ ಕೀಲೆ, ಸದಾಶಿವ ಗೌಡ ಮಿಯೋಳ್ಪೆ, ಪರಮೇಶ್ವರ ಕೆ. ಕಳಂಗಾಜೆ, ಉಮೇಶ ಕೆಳಗಿನಕೇರಿ, ಜಯಂತ ಅಂಬುಲ, ಮಾಧವ ಎಣ್ಮೂರು, ಕಾಂತ ಪರವ ಮರಕ್ಕಡ, ಬಾಲಕಿ ಅಭಿಕಾರ, ರಾಜೀವಿ ಬೊಮ್ಮೊಳಿಗೆ ಹಾಗೂ ಕಾರ್ಯದರ್ಶಿಯಾಗಿ ದಮಯಂತಿಯವರು ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘದ ಕಾರ್ಯವೈಖರಿಗೆ ಸಂದಿವೆ ಹಲವು ಪ್ರಶಸ್ತಿಗಳು..: *೨೦೧೪-೧೫ರಲ್ಲಿ ದ.ಕ. ಹಾಲು ಒಕ್ಕೂಟದ ಪುತ್ತೂರು ತಾಲೂಕು ಮಟ್ಟದಲ್ಲಿ ಪ್ರಥಮ, *೨೦೧೫-೧೬ರಲ್ಲಿ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಅತ್ಯುತ್ತಮ ಸಾಧನಾ ಪ್ರಶಸ್ತಿ, *೨೦೧೫-೧೬ರಲ್ಲಿ ಕರ್ನಾಟಕ ಸರಕಾರದ ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, *೨೦೧೬-೧೭ರಲ್ಲಿ ದ.ಕ. ಹಾಲು ಒಕ್ಕೂಟದ ಜಿಲ್ಲಾ ಮಟ್ಟದಲ್ಲಿ ಪ್ರಥಮ, *೨೦೧೭-೧೮ರಲಲ್ಲಿ ದ.ಕ. ಹಾಲು ಒಕ್ಕೂಟದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿರುವ ಸಂಘವು ೨೦೧೯-೨೦೨೦ನೇ ಸಾಲಿನ ದ.ಕ ಹಾಲು ಒಕ್ಕೂಟದ ವತಿಯಿಂದ ಕೊಡಮಾಡುವ ಪುತ್ತೂರು, ತಾಲೂಕುಗಳ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಕೊಡ ಮಾಡುವ ಪ್ರಶಸ್ತಿಗೂ ಕೂಡ ಭಾಜನವಾಗಿದೆ.

ಸಂಘದಲ್ಲಾದ ಅಭಿವೃದ್ಧಿ ಕಾರ್ಯಗಳು.. *ಸಾಂದ್ರಶೀತಲೀಕರಣ ಘಟಕ ಸ್ಥಾಪನೆ, *ಸುಸಜ್ಜಿತವಾದ ಸಭಾಂಗಣ ನಿರ್ಮಾಣ, *ಹಾಳೆ ಸಂಸ್ಕರಣ ಘಟಕ ಸ್ಥಾಪನೆ, *ಕೆಳಗಿನಕೇರಿ -ಕೊಪ್ಪ ಶಾಖೆ ಪ್ರಾರಂಭ, *ಪ್ರತಿ ಶಾಖೆಗಳಿಗೆ ಸೋಲಾರ್ ಅಳವಡಿಕೆ, *ಶಾಖೆಗಳಿಗೆ ಕಂಪ್ಯೂಟರ್ ಸೇವೆ ಆರಂಭ, *ನಾಲ್ಕಂಬ ಶಾಖೆ ಪ್ರಾರಂಭ, *ಗಾಳಿಬೆಟ್ಟು ಶಾಖೆಗೆ ಸುಸಜ್ಜಿತವಾದ ಕಟ್ಟಡ, *ಗಾಳಿಬೆಟ್ಟು ಶಾಖೆಗೆ ಗೋದಾಮು ವಿಸ್ತರಣೆ, * ಸಂಘದ ಸದಸ್ಯರಿಂದ ಗುಣಮಟ್ಟದ ಹಾಲು ಪೂರೈಕೆ *ದಿನವೊಂದಕ್ಕೆ ಸರಾಸರಿ ೨,೬೦೦ ಲೀ. ಹಾಲು ಸಂಗ್ರಹ.

ಸಂಘದ ಸೇವೆಗಳು…: *ಸಕಾಲದಲ್ಲಿ ಪಶು ಆಹಾರದ ಲಭ್ಯತೆ, ವಿವಿಧ ರೀತಿಯ ಪಶು ಆಹಾರದ ಪೂರೈಕೆ, *ಸಹಾಯಧನ/ಉಚಿತವಾಗಿ ಹಸಿರು ಮೇವಿನ ಕಡ್ಡಿ ವಿತರಣೆ, *ಒಕ್ಕೂಟದ ಯೋಜನೆಗಳನ್ನು ಶೀಘ್ರವಾಗಿ ತಲುಪಿಸುವುದು, *ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಶಾಲೆ, *ಹಸು ಮರಣ ಹೊಂದಿದಲ್ಲಿ ಸಹಾಯಧನ, *ಸದಸ್ಯರು ಮರಣ ಹೊಂದಿದಲ್ಲಿ ಸಹಾಯಧನ *ಕಾಲು ಬಾಯಿ ಲಸಿಕಾ ಕಾರ್ಯಕ್ರಮದ ನಿಖರ ಅನುಷ್ಠಾನ, *ಎಸ್‌ಎಸ್‌ಎಲ್‌ಸಿ/ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದವರಿಗೆ ವಿದ್ಯಾರ್ಥಿ ವೇತನ. *ಹಸುಗಳಿಗೆ ಉಚಿತ ಇನ್ಸೂರೆನ್ಸ್ ಯೋಜನೆ.

ಸಂಘದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ …


ಸಂಘದಲ್ಲಿ ಎಲ್ಲಾ ಹೈನುಗಾರರನ್ನು ಸಮಾನವಾಗಿ ಗೌರವಯುತವಾಗಿ ನಡೆಸಿಕೊಂಡು ಅವರ ಶ್ರಮಕ್ಕೆ ನಿರಂತರ ಗೌರವವನ್ನು ಅರ್ಪಿಸುತ್ತಾ ಸರಕಾರದಿಂದ, ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತಾ ಸಮಾಜದಲ್ಲಿ ಸಾಮಾಜಿಕ ಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದ ಫಲವಾಗಿ ಈ ಪ್ರಶಸ್ತಿಗಳು ನಮ್ಮ ಸಂಘವನ್ನು ಹುಡುಕಿಕೊಂಡು ಬಂದಿದೆ. ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುತ್ತಿದ್ದೇನೆ  – ಧನಂಜಯ ಕೇನಾಜೆ  ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರ ಸಂಘ ಚಾರ್ವಾಕ

ಇಂದು(ದ. 5)  ಪ್ರಶಸ್ತಿ ಪ್ರದಾನ
ಮಂಗಳೂರು ದ.ಕ ಜಿಲ್ಲಾ ಹಾಲು ಒಕ್ಕೂಟದ ಮಹಾಸಭೆಯು ದ. 5ರಂದು ಮಂಗಳೂರಿನಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಚಾರ್ವಾಕ ಹಾಲು ಉತ್ಪಾದಕರ ಸಹಕಾರಕ್ಕೆ ಅತ್ಯುತ್ತಮ ಸಂಘ ಪ್ರಶಸ್ತಿಯನ್ನು ದ.ಕ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆಯವರು ಪ್ರದಾನ ಮಾಡಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.