ನೆಲ್ಯಾಡಿ: ವಿವಿಧೆಡೆ ಜರಗಿದ ಮುದ್ದುಕೃಷ್ಣ ವೇಷ ಆನ್ಲೈನ್ ಸ್ಪರ್ಧೆಯಲ್ಲಿ ಕುಶಾಲಪ್ಪ ನಮ್ಮ ಕಲಾವಿದೆರ್ ನೆಲ್ಯಾಡಿ ಇವರ ಸಾರಥ್ಯದ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ ಇದರ ಪುಟಾಣಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಒಡಿಯೂರು ಸಂಸ್ಥಾನದಿಂದ 4 ವರ್ಷದೊಳಗಿನ ಪುಟಾಣಿಗಳಿಗೆ ಆಯೋಜಿಸಿದ್ದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಶಿರಾಡಿ ಸಂಪ್ಯಾಡಿ ನಿವಾಸಿ ಮಾಸ್ಟರ್ ಅದ್ವಿನ್ ಎಸ್. ಪ್ರಥಮ ಹಾಗೂ ಕೆ.ಎಲ್.ಪ್ರಣಮ್ ರೈ ರಾಮಕುಂಜ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡಿದ್ದಾರೆ. ಜೆಸಿಐ ಮೂಡುಬಿದಿರೆ ತ್ರಿಭುವನ್ ಆಯೋಜಿಸಿದ ಫೋಟೋ ಮತ್ತು ವಿಡಿಯೋ ಮುದ್ದುಕೃಷ್ಣ ಸ್ಪರ್ಧೆಯಲ್ಲಿ 3 ವರ್ಷ ಮೇಲ್ಪಟ್ಟ ಫೋಟೋ ಸ್ಪರ್ಧೆಯಲ್ಲಿ ಮಾಸ್ಟರ್ ಅದ್ವಿನ್ ಎಸ್.ಶಿರಾಡಿ ಪ್ರಥಮ ಸ್ಥಾನ, 3 ವರ್ಷದ ಕ್ಯಾಮರಾ ಫೋಟೋ ಸ್ಪರ್ಧೆಯಲ್ಲಿ ಕುಮಾರಿ ಸನ್ನಿಧಿ ಅರಸಿನಮಕ್ಕಿ ಬೂಡುಮುಗೇರ್ ಪ್ರಥಮ, 3 ವರ್ಷ ಮೇಲ್ಪಟ್ಟ ವಿಡಿಯೋ ವಿಭಾಗದಲ್ಲಿ ಸನ್ನಿಧಿ ಪ್ರಥಮ, ಕೆ.ಎಲ್.ಪ್ರಥಮ್ ರೈ ರಾಮಕುಂಜ ದ್ವಿತೀಯ, ನೆಲ್ಯಾಡಿ ಸೂರ್ಯನಗರ ಶ್ರೀ ರಾಮ ವಿದ್ಯಾಲಯ ಆಯೋಜಿಸಿದ ಮನೆ ಮನಗಳಲ್ಲಿ ಕೃಷ್ಣಲೋಕ ಸ್ಪರ್ಧೆಯಲ್ಲಿ ಕುಮಾರಿ ಇಹಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಕರಾವಳಿ ಕರ್ನಾಟಕ ಡ್ಯಾನ್ಸ್ ಯೂನಿಯನ್ ಮಂಗಳೂರು ಇವರು ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಸನ್ನಿಧಿ ಅರಸಿನಮಕ್ಕಿ ಬೂಡುಮುಗೇರ್ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡಿದ್ದಾರೆ. ಯುಪ್ಲಸ್ ಚಾನೆಲ್ ಉಜಿರೆ ಆಯೋಜಿಸಿದ ನಮ್ಮನೆ ಕೃಷ್ಣ ಸ್ಪರ್ಧೆಯಲ್ಲಿ ಸನ್ನಿಧಿ ಅತ್ಯುತ್ತಮ ಫೋಟೋ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಪಂದನ ವಾಹಿನಿ ಉಡುಪಿ ನ್ಯೂಸ್ ಎಂಟ್ ಮೀಡಿಯಾ ಹೌಸ್ ಪ್ರಸ್ತುತಿಯಲ್ಲಿ ಅಷ್ಟಮಿ ವಿಶೇಷ ಸ್ಪರ್ಧೆ ಮುದ್ದುಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ಸನ್ನಿಧಿ ಪ್ರಥಮ, ಕೆ.ಎಲ್.ಪ್ರಥಮ್ ರೈ ರಾಮಕುಂಜ ತೃತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಿಗ್ ಬಜಾರ್ ಉಡುಪಿ ಆಯೋಜಿಸಿದ ಮುದ್ದು ಕೃಷ್ಣ ವಿಡಿಯೋ ಸ್ಪರ್ಧೆಯಲ್ಲಿ ಸನ್ನಿಧಿ ಬೂಡುಮುಗೇರ್ ದ್ವಿತೀಯ, ಜೆಸಿಐ ಉಪ್ಪಿನಂಗಡಿ ಜೇಸಿ ಸಪ್ತಾಹ ಸಪ್ತ ಸಂಭ್ರಮ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಸನ್ನಿಧಿ ದ್ವಿತೀಯ ಹಾಗೂ ಇಹಾ ನಡುಮನೆ ತೃತೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆರಾಧ್ಯ ಗೆಳೆಯರ ಬಳಗ ಸಿದ್ದಾಪುರ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಸನ್ನಿಧಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಜೆಸಿಐ ಬೆಳ್ಮಣ್ ಸಪ್ತವರ್ಣ 2020 ಮುದ್ದುಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಸನ್ನಿಧಿ ಬೂಡುಮುಗೇರ್ ತೀರ್ಪುಗಾರರಿಂದ ಮೆಚ್ಚುಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.