ಪುತ್ತೂರು: ಅಲ್ಯೂಮಿನಿಯಂ ಫ್ಯಾಬ್ರಿಕೇಶನ್, ಫರ್ನಿಚೇರ್ ಹಾಗೂ ಹೋಮ್ ಅಪ್ಲಾಯನ್ಸ್ಗಳ ಮಳಿಗೆ ಸಮೃದ್ಧಿ ದ.೫ರಂದು ಪಡೀಲು ಮುಖ್ಯ ರಸ್ತೆಯ ಎನ್.ಎಸ್ ಆರ್ಕೆಡ್ನಲ್ಲಿ ಶುಭಾರಂಭಗೊಂಡಿತು.
ನೂನತ ಮಳಿಗೆಯನ್ನು ಪಾಲುದಾರರಾದ ಪ್ರಕಾಶ್ ಹಾಗೂ ಅವರ ಪತ್ನಿ ದಾಕ್ಷಾಯಿನಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕೆಸಿಡಿಸಿಯ ರವಿಪ್ರಸಾದ್ ರಾಮಕುಂಜ ಪ್ರಥಮ ಖರೀದಿ ಮಾಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪುತ್ತೂರು ಶಾಖೆಯ ವ್ಯವಸ್ಥಾಪಕಾ ಸುನೀಲ್ ಕುಮಾರ್, ಸಿಬಂದಿಗಳಾದ ಸೋನಲ್ ಕುಮಾರ್, ರಾಜೇಶ್ ಎ., ಮುರಳೀಧರ ರೈ, ವಿಶ್ವನಾಥ ಗೌ, ಗಿರಿಧರ ರಾವ್, ಪಾಂಡುರಂಗ ಆಚಾರ್ಯ, ಗೋಪಿನಾಥ, ಮಾಧವ ರಾವ್, ಮುಕ್ತಬಾಯಿ ತೊಕ್ಕೊಟ್ಟು, ಅಶ್ವಿನಿ, ರಶ್ಮಿ ಸೇರಿದಂತೆ ಹಲವು ಮಂದಿ ಆಗಮಿಸಿ ಸಂಸ್ಥೆಗೆ ಶುಭಹಾರೈಸಿದರು.
ವಿವಿಧ ವಿನ್ಯಾಸದ ಎಲ್ಲಾ ರೀತಿಯ ಫರ್ನಿಚೇರ್ಗಳು, ಎಲ್ಲಾ ರೀತಿಯ ಹೋಮ್ ಎಪ್ಲಾಯನ್ಸ್ಗಳು, ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ಗಳನ್ನು ಕ್ಲಪ್ತ ಸಮಯದಲ್ಲಿ ಒದಗಿಸಿಕೊಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.