ಉಪ್ಪಿನಂಗಡಿ: ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೆಮ್ಮಾರ ಅಂಗನವಾಡಿ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ನಡೆಯಿತು.
ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಶಾರದಾ, ಪ್ರಯೋಗಾಲಯದ ಯಶ್, ಫಾರ್ಮಾಸಿಸ್ಟ್ ನವ್ಯ, ಆಶಾಕಾರ್ಯಕರ್ತೆಯರಾದ ದಿವ್ಯಾ, ಅನಂತಾವತಿ, ಅಂಗನವಾಡಿ ಶಿಕ್ಷಕಿ ಸುಂದರಿ ಕೆ., ಸಹಾಯಕಿ ಮೀನಾಕ್ಷಿ, ಕೆಮ್ಮಾರ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಅಝೀಝ್ ಬಿ.ಕೆ., ಮತ್ತಿತರರು ಉಪಸ್ಥಿತರಿದ್ದರು. ಮೂವತ್ತಕ್ಕೂ ಹೆಚ್ಚು ಜನರ ಕೋವಿಡ್ ಪರೀಕ್ಷೆ ನಡೆಸಿದರು.