HomePage_Banner
HomePage_Banner
HomePage_Banner
HomePage_Banner

ನಗರಸಭೆ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸೌಲಭ್ಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸೂಕ್ತ ಸ್ಥಳಾವಕಾಶಕ್ಕಾಗಿ ಮುಂದಿನ ವಾರ ಪರಿಶೀಲನೆ – ಜೀವಂಧರ್ ಜೈನ್

ಪುತ್ತೂರು: ನಗರಸಭೆ ಪಟ್ಟಣದಲ್ಲಿ ವಾಹನ ಪಾರ್ಕಿಂಗ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ವಾರ ವಿವಿಧ ಕಡೆ ಪರಿಶೀಲನೆ ನಡೆಸಲಾಗುವುದು ಎಂದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ವಾಹನ ದಟ್ಟಣೆ ಮತ್ತು ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ನೀಡುವ ನಿಟ್ಟಿನಲ್ಲಿ ಈಗಿರುವ ಪಾರ್ಕಿಂಗ್ ಮತ್ತು ಮುಂದೆ ಯಾವ ಸ್ಥಳದಲ್ಲಿ ಪಾರ್ಕಿಂಗ್ ಸೌಲಭ್ಯ ಒದಗಿಸ ಬಹುದೆಂದು ಪುತ್ತೂರು ನಗರ ಠಾಣೆ ಮತ್ತು ಸಂಚಾರ ಪೊಲೀಸರೊಂದಿಗೆ ಡಿ.4 ರಂದು ಸಂಜೆ ನಗರಸಭೆ ಮೀಟಿಂಗ್ ಹಾಲ್ ನಲ್ಲಿ ಸಭೆ ನಡೆಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಪೌರಾಯುಕ್ತೆ ರೂಪಾ ಶೆಟ್ಟಿ, ನಗರ ಪೊಲೀಸ್ ಠಾಣೆ ನಿರೀಕ್ಷಕ ಗೋಪಾಲ್ ನಾಯ್ಕ್, ಸಂಚಾರ ಪೊಲೀಸ್ ಠಾಣೆ ಎ.ಎಸ್.ಐ ಗಿರಿಯಪ್ಪ ಗೌಡ, ನಗರಸಭೆ ಕಾರ್ಯಪಾಲಕ ಅಬಿಯಂತರ ಅರುಣ್, ಅಭಿಯಂತರ ಶ್ರೀಧರ್ ನಾಯ್ಕ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ, ರಾಜೇಶ್ ನಾಯ್ಕ್ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
 

About The Author

Related posts

1 Comment

  1. ಸುದರ್ಶನ್

    ಪುತ್ತೂರು ಪಟ್ಟಣದಲ್ಲಿ ಪ್ರತಿಯೊಂದು ವಾಣಿಜ್ಯ ಸಂಕೀರ್ಣ ದಲ್ಲೂ ನಮೂದಿಸಲಾದ ಜಾಗದಲ್ಲಿ ಪಾರ್ಕಿಂಗ್ ಸೌಲಬ್ಯ ಬದಲು ವ್ಯಾಪಾರ ಅಂಗಡಿ ಮಾಡಿರುವುದರಿಂದ ನಗರದಾದ್ಯಂತ ಸಾರ್ವಜನಿಕ ಪಾರ್ಕಿಂಗ್ ಕೊರತೆ ಇದೆ. ಆ ನಿಟ್ಟಿನಲ್ಲಿ ಜಿಲ್ಲಾದಿಕಾರಿಗಳು 15 ದಿನದ ಹಿಂದೆ ಸಹಾಯಕ ಅಯುಕ್ತರು,ತಹಸಿಲ್ದಾರ್,ನಗರಸಭೆ ಅಯುಕ್ತರ ಸಮ್ಮುಖದಲ್ಲಿ ಸೂಚನೆ ನೀಡಿದ್ದನ್ನು ನಗರಸಭೆ ಪಾಲಿಸತಕ್ಕದ್ದು. ಅ ಪ್ರಕಾರ ಪಾರ್ಕಿಂಗ್ ಜಾಗದ ಅಂಗಡಿಗಳನ್ನು ತೆರವು ಮಾಡಿ ಪಾರ್ಕಿಂಗ್ ಸೌಲಬ್ಯ ಕಲ್ಪಿಸಲಿ. ನಗರದಾದ್ಯಂತ ನಗರಸಬೆ ಪಾರ್ಕಿಂಗ್ ಶುಲ್ಕ ವಸೂಲಿ ಪದ್ದತಿ ಈ ಕಾರಣಕ್ಕಾಗಿ ಕೈಬಿಡತಕ್ಕದ್ದು.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.