ಕಡಬ: ಕಡಬ ತಾಲೂಕು ಪತ್ರಕರ್ತರ ಸಂಘದ ಮುಂದಿನ ಅವಧಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷ ರಾಗಿ ಉದಯವಾಣಿ ಪತ್ರಿಕೆಯ ಕಡಬ ವರದಿಗಾರ ನಾಗರಾಜ್ ಎನ್.ಕೆ, ಪ್ರಧಾನ ಕಾರ್ಯದರ್ಶಿ ಯಾಗಿ ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರ ವಿಜಯ ಕುಮಾರ್ ಕಡಬ ಆಯ್ಕೆಯಾಗಿದ್ದಾರೆ.
ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಶನಿವಾರದಂದು ನಡೆಯಿತು. ಉಪಾಧ್ಯಕ್ಷರಾಗಿ ಸುಧಾಕರ ಆಚಾರ್ಯ ಕಾಣಿಯೂರು, ಜೊತೆ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ಕಡಬದ ವರದಿಗಾರ ಪ್ರವೀಣ್ ರಾಜ್ ಕೊಯಿಲ, ಕೋಶಾಧಿಕಾರಿಯಾಗಿ ವಾರ್ತಾಭಾರತಿಯ ತಸ್ಲೀಂ ಮರ್ಧಾಳ ಅವರನ್ನು ಆಯ್ಕೆ ಮಾಡಲಾಯಿತು.