ಉಪ್ಪಿನಂಗಡಿ: ಇಲ್ಲಿನ ಮೂರ್ತೆದಾರರ ಸೇವಾ ಸಹಕಾರ ಸಂಘದ ಹೊಸ ವರ್ಷದ ಕ್ಯಾಲೆಂಡರ್ ಅನ್ನು ಸಂಘದ ಕಚೇರಿಯಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಬಿಡುಗಡೆಗೊಳಿಸಿದರು.
ಸಂಘದ ಅಧ್ಯಕ್ಷೆ ಶ್ರೀಮತಿ ಉಷಾ ಅಂಚನ್ ಅಧ್ಯಕ್ಷತೆ ವಹಿಸಿದರು. ಮಾಜಿ ಅಧ್ಯಕ್ಷರಾದ ವರದರಾಜ್ ಎಂ., ಶೇಖರ ಪೂಜಾರಿ ಶಿಬಾರ್ಲ, ಬೆಳ್ತಂಗಡಿಯ ಗುರುದೇವಾ ಸಹಕಾರ ಸಂಘದ ವಿಶೇಷಾಧಿಕಾರಿ ಮೋನಪ್ಪ ಪೂಜಾರಿ ಕಂಡೆತ್ಯಾರು, ತಣ್ಣೀರುಪಂತ ಗ್ರಾ.ಪಂ. ಮಾಜಿ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಸಂಘದ ನಿರ್ದೇಶಕರಾದ ಜನಾರ್ದನ ಬಿ. ನೆಲ್ಯಾಡಿ, ಮೋನಪ್ಪ ಪೂಜಾರಿ ನಾಗನಕೋಡಿ, ಧರ್ಮಣ ಪೂಜಾರಿ ಪೆರಿಯಡ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಡೀಕಯ್ಯ ಗೌಂಡತ್ತಿಗೆ, ಶಾಖಾ ವ್ಯವಸ್ಥಾಪಕರಾದ ಎಲ್ಯಣ ಎಸ್., ಯಶೋಧ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.