HomePage_Banner
HomePage_Banner
HomePage_Banner
HomePage_Banner

ಪಟ್ಲೇರ್ ಕುಂಬ್ರ ಬಾಲಕೃಷ್ಣ ರೈ ಶ್ರದ್ದಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿವಾಸಿ ಬಾಲಕೃಷ್ಣ ರೈ ಅವರ ಶ್ರದ್ದಾಂಜಲಿ ಸಭೆಯು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಡ.5ರಂದು ನಡೆಯಿತು.

ಒಳಮೊಗ್ರು ಗ್ರಾಪಂ ನ ಮಾಜಿ ಸದಸ್ಯರಾಗಿದ್ದ ಕುಂಬ್ರ ಬಾಲಕೃಷ್ಣ ರೈ ಅವರು ಒಳಮೊಗ್ರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದರು. ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು ಅನೇಕ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸಿದ್ದರು. ಅನೇಕ ಮಂದಿ ಯಕ್ಷಗಾನ ಕಲಾಗಾರರನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಾಜಕೀಯದಲ್ಲಿದ್ದರೂ ಎಲ್ಲರೊಂದಿಗೆ ಆತ್ಮೀಯತೆಯಿಂದ ಇದ್ದ ಇವರು ಸ್ನೇಹ ಜೀವಿಯಗಿ ಬಾಳಿ ಬದುಕಿದರು ಎಂದು ಸಭೆಯಲ್ಲಿದ್ದ ಅತಿಥಿಗಳು ಮೃತರ ಗುಣಗಾನ ಮಾಡಿದರು.

ಸಭೆಯಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ನೆಟ್ಟಣಿಗೆ ಮುಡ್ನೂರು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸವಣೂರು ವಿದ್ಯಾರಶ್ಮಿ ವಿದ್ಯಾ ಸಮುಚ್ಚಯದ ಸಂಚಾಲಕ ಸವಣೂರು ಕೆ ಸೀತಾರಾಮ ರೈ, ಚಿಕ್ಕಪ್ಪ ನಾಯ್ಕ್ ಅರಿಯಡ್ಕ, ಕೆ ಎಚ್ ದಾಸಪ್ಪ ರೈ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸರಪಾಡಿ ಅಶೋಕ್ ಶೆಟ್ಟಿ, ದ ಕ ಯೂನಿಯನ್ ಬ್ಯಾಂಕ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕಟೀಲು ಆರು ಮೇಳಗಳ ಸಂಚಾಲಕ ಕಲ್ಲಾಡಿ ವಿಠಲ್ ಶೆಟ್ಟಿ, ಕುಂಬ್ರ ಸಿ ಎಬ್ಯಾಂಕ್ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕೈಕಾರ, ರಾಜ್ಯ ಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ, ರಿಸರ್ವ್ ಬ್ಯಾಂಕ್ ಮಾಜಿ ನಿದೇರ್ಶಕ ನವೀನ್ ಭಂಡಾರಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ,ಜಯರಾಜ್ ಭಂಡಾರಿ, ಪುರಂದರ್ ರೈ ಮಿತ್ರಂಪಾಡಿ, ಚಂದ್ರಹಾಸ್ ರೈ ಬೋಳೋಡಿ, ಗಂಗಾಧರ್ ರೈ ಕುಯ್ಯಾರು, ಒಳಮೊಗ್ರು ಗ್ರಾಪಂ ಮಾಜಿ ಸದಸ್ಯಶಶಿಕಿರಣ್ ರೈ ನೂಜಿಬೈಲು, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಮನೋಹರ್ ರೈ ಎಂಡೆಸಾಗು, ಶರತ್ ಕುಮಾರ್ ರೈ ಎ ಜಿ, ಒಳಮೊಗ್ರು ಗ್ರಾಮ ಸಮಿತಿ ಕಾಂಗ್ರೆಸ್ ಅಧ್ಯಕ್ಷ ವಿನೋಧ್ ಶೆಟ್ಟಿ ಮುಡಾಲ ಸೇರಿದಂತೆ ಮೃತರ ಕುಟುಂಬಸ್ಥರು, ಬಂಧುಮಿತ್ರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.