ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಚೇತನಾ ಆಸ್ಪತ್ರೆ ಪುತ್ತೂರು ಹಾಗೂ ಡಯಾಗ್ನಾಸ್ಟಿಕ್ ಲ್ಯಾಬೋರೇಟರಿ ಪುತ್ತೂರು ಇವುಗಳ ಸಹಯೋಗದಲ್ಲಿ ಮತ್ತು ಪ್ರಧಾನ ಅಂಚೆ ಕಛೇರಿ ಪುತ್ತೂರು ಇವರ ಸಹಕಾರದಲ್ಲಿ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ ಕಾರ್ಯಕ್ರಮದ ಪ್ರಯುಕ್ತ ಉಚಿತ ಮಧುಮೇಹ, ರಕ್ತದೊತ್ತಡ, ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ತಪಾಸಣೆ ಕಾರ್ಯಕ್ರಮ ಜರಗಲಿದೆ.
ಕಾರ್ಯಕ್ರಮವು ಪುತ್ತೂರು ಪ್ರಧಾನ ಅಂಚೆ ಕಛೇರಿಯಲ್ಲಿ ಡಿ.8 ರಂದು ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಜರಗಲಿದ್ದು, ಸಾರ್ವಜನಿಕರು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.