HomePage_Banner
HomePage_Banner
HomePage_Banner
HomePage_Banner
Breaking News

ದ.ಕ ಜಿಲ್ಲಾಮಟ್ಟದ ವಿಕ ಸೂಪರ್ ಸ್ಟಾರ್ ರೈತ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರೈತನೆಂಬ ಸ್ಟಾರ್ ಇಲ್ಲದೇ ಇದ್ರೆ ಸ್ಟಾರ್ ಹೊಟೇಲ್ ಗಳಿದ್ದು ಪ್ರಯೋಜನವಿಲ್ಲ – ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಪುತ್ತೂರು: ಸಾಧಕ ರೈತರನ್ನು ಗುರುತಿಸಿ ಅವರನ್ನು ಪುರಸ್ಕರಿಸುವ ನೀಡಿ ಪ್ರೋತ್ಸಾಹಿಸುವ ವಿಜಯ ಕರ್ನಾಟಕ ಸಾರಥ್ಯದ ವಿಕ ಸೂಪರ್ ಸ್ಟಾರ್ ರೈತ-2020 ದ.ಕ ಜಿಲ್ಲಾ ಮಟ್ಟದ ಕಾರ್ಯಕ್ರಮ ಡಿ.18ರಂದು ಬೆಳಿಗ್ಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.

ಕ್ರಷಿಯಲ್ಲಿ ಮಾದರಿ ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಜಯ ಕರ್ನಾಟಕ ೩ ನೇ ವತ್ತದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಹಿಂಗಾರ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿ, ಆಶೀರ್ವದಿಸಿದರು.

ಕೊರೋನಾ ಬಂದು ಕ್ರಷಿ ಚಟುವಟಿಕೆ ಉತ್ತಮವಾಯಿತು.ಆರ್ಥಿಕ ಬದುಕು ಕ್ರಷಿ ಚಟುವಟಿಕೆಯಿಂದಾಗಿ ಮೇಲೆ ಕಾಣುತ್ತಿದೆ. ಇಂತಹ ಆಯಾಮಗಳಿಗೆ ರೈತಾಪಿ ವರ್ಗದವರು ಕಾರಣ. ಕೊರೋನಾ ತಟ್ಡಿದ್ದು ನಗರ ಪ್ರದೇಶಕ್ಕೆ ಮಾತ್ರ ಹಳ್ಳಿಯ ರೈತನಿಗೆ ತಟ್ಟಿಲ್ಲ. ಯಾಕೆಂದರೆ ರೈತರ ಕ್ರಷಿಯಲ್ಲೇ‌ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದ ಅವರು ರೈತನೆಂಬ ಸ್ಟಾರ್ ಇಲ್ಲದೇ ಇದ್ದೆ ಸ್ಟಾರ್ ಹೊಟೇಲ್ ಗಳಿದ್ದರೂ ಪ್ರಯೋಜನವಿಲ್ಲ ಎಂದರು.

ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಷ್.ಡಿ ಶಿವರಾಮ್ ಅವರು ಅಧ್ಯಕ್ಷತೆ ವಹಿಸಿದ್ದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ, ಶ್ರೀ ಕ್ಷೇ.ಧ.ಗ್ರಾ.ಯೋ ಬಿ.ಸಿ ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ತಾಲೂಕಿನ ಕ್ರಷಿ ಅಧಿಕಾರಿ ಯಶಸ್ , ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಶುಭಹಾರೈಸಿದರು.

ವಿ ಕ ಸೂಪರ್ ಸ್ಟಾರ್ ರೈತ ಪುರಸ್ಕಾರ:
ಹುಲ್ಲು ಕತ್ತರಿಸು ಯಂತ್ರವನ್ನು ಪರಿಚಯಿಸಿದ ಬಂಟ್ವಾಳ ಸಜಿಪಮೂಡಾದ ಗಣಪತಿ ಭಟ್ ಎನ್‌.ಕೆ, ಜೇನು ಉದ್ಯಮ ಕ್ರಷಿಕ ಕೇಪು ನಿವಾಸಿ ಸುಧಾಕರ ಪೂಜಾರಿ, ಕ್ರಷಿಯಂತ್ರದ ಮೂಲಕ ಕ್ರಷಿ ಚಟುವಟಿಕೆಯಲ್ಲಿ ಯಶಸ್ಸು ಕಂಡ ಮೂಡಬಿದ್ರೆಯ ಇಂಗ್ಲೇಷಿಯಸ್ ಲೋಬೋ, ಪ್ರಗತಿಪರ ಹೈನುಗಾರ ಪೆರ್ಲ ಎಣ್ಮಕಜೆ ಅಬೂಬಕ್ಕರ್ ಸಿದ್ದೀಕ್ , ಪ್ರಗತಿಪರ ಹೈನುಗಾರಿಕಾ ಸುಳ್ಯ ದುಗ್ಗಳಡ್ಕದ ಪುರುಷೋತ್ತಮ, ಮೊಜಂಟಿ ಜೇನು ಕ್ರಷಿಯ ಪಾಣಾಜೆಯ ವೆಂಕಡಕ್ರಷ್ಣ ಭಟ್, ಆರೋಗ್ಯ ಇಲಾಖೆಯ ವಾಹನ ಚಾಲಜರಾಗಿದ್ದು ಜೇನು ಕ್ರಷಿಕ ಬಂಟ್ವಾಳದ ಲಕ್ಷ್ಮಣ ಗೌಡ , ಮೀನುಗಾರ ಕ್ರಷಿಕ ಕೂಲೂರು ಆನಂದಪುತ್ರ, ಮಿಶ್ರಬೆಳೆ ಕ್ರಷಿಕ ಕಾರ್ಕಳದ ಶೈಲೇಶ್ ಅವರನ್ನು‌ ವಿ ಕ ಸೂಪರ್ ರೈತ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಮಹೇಶ್ ಪಟ್ಟಾಜೆ, ಮಹಮ್ಮದ್ ಆರೀಪ್, ಆಸೀಪ್, ವಿಜಯ ಕೋಟ್ಯಾನ್, ಸನ್ಮಾನಿತರನ್ನು‌ ಪರಿಚಯಿಸಿದರು.

ಸ್ಥಾನೀಯ ಸಂಪಾದಕ ಯು.ಕೆ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಫಲಪುಷ್ಪ, ರಮೇಶ್ ಮಯ್ಯ, ಕುಮಾರ್ ಕಲ್ಲಾರೆ, ಬಾಲಕ್ರಷ್ಣ ಕೊನೈಲ, ವಸಂತ್ ಅತಿಥಿಗಳನ್ನು ಗೌರವಿಸಿದರು. ಜಿಲ್ಲಾ ವರದಿಗಾರ ಸುಧಾಕರ್ ಸುವರ್ಣ ಸ್ವಾಗತಿಸಿದರು. ಮುಖ್ಯ ಉಪಸಂಪಾದಕ ರವಿಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು, ಉಪಾಧ್ಯಕ್ಷ ವಿಶ್ವನಾಥ ಗೌಡ, ಖಜಾಂಜಿ ಸುರೇಶ್ ಗೌಡ ಕಲ್ಲಾರೆ, ವಲಯ ಉಸ್ತುವಾರಿ ಲಿಂಗಪ್ಪ ಗೌಡ, ಮಹಿಳಾ ಗೌಡ ಸಂಘದ ಗೌರವಾಧ್ಯಕ್ಷೆ ಗೌರಿ ಬನ್ನೂರು, ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ವಿದ್ಯಾ, ಗೌಡ ಸಮುದಾಯ ಭವನದ ಉಸ್ತುವಾರಿ ಸಮಿತಿ ಅಧ್ಯಕ್ಷ ಪ್ರೇಮಾನಂದ, ನಗರಸಭಾ ಸದಸ್ಯೆ ಪ್ರೇಮಲತಾ ನಂದಿಲ, ಒಕ್ಕಲಿಗ ಗೌಡ ಸಂಘದ ರವಿ ಮುಂಗ್ಲಿಮನೆ, ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಸೇರಿದಂತೆ ಹಲವಾರು ಮಂದಿ ಸ್ವಾಮೀಜಿಗಳನ್ನು‌ ಸಂಘದ ಕಚೇರಿಯಲ್ಲಿ ಸ್ವಾಗತಿಸುವ ವೇಳೆ ಉಪಸ್ಥಿತರಿದ್ದರು.ಸಭಾ ಕಾರ್ಯಕ್ರಮದ ಆರಂಭದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘದ ನೇತ್ರತ್ವದಲ್ಲಿ ಸಾಂಸ್ಕ್ರತಿಕ‌ ಕಾರ್ಯಕ್ರಮ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.