ಕಡಬ: ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ರೈತ ದಿನಾಚರಣೆಯ ಅಂಗವಾಗಿ ಕಿಡ್ಸ್ ಸಂಸ್ಥೆಯ ಸಹಯೋಗದಲ್ಲಿ ಕಡಬ ಬೆಥನಿ ಆಶ್ರಮದಲ್ಲಿ ರೈತರಿಗೆ ಕೃಷಿ ಸಾಲದ ಬಗ್ಗೆ ಮಾಹಿತಿ ಕಾರ್ಯಕ್ರಮ ಡಿ.೨೩ರಂದು ನಡೆಯಿತು.
ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಟಿ.ವಿ. ರವೀಂದ್ರಕುಮಾರ್ ಕೃಷಿಸಾಲದ ಬಗ್ಗೆ ಮಾಹಿತಿ ನೀಡಿ, ಬ್ಯಾಂಕಿನಲ್ಲಿ ರೈತರಿಗೆ ಕೃಷಿ ಸಾಲ, ಅಲ್ಪಾವಧಿ ಸಾಲ, ದೀರ್ಘಾವಧಿ ಸಾಲ, ಬಂಗಾರ ಅಡಮಾನ ಸಾಲ, ಮೀನು, ಕುರಿ, ಕೋಳಿ, ಮೇಕೆ ಸಾಕಾಣಿಕೆ, ಪಿ.ಎಮ್.ಜೆ.ಜೆ.ವೈ,ಪಿ.ಎಮ್,ಎಸ್.ಬಿ.ಐ, ಎ.ಪಿ.ವೈ, ಉಳಿತಾಯ ಖಾತೆ, ಆರ್.ಡಿ, ಇತರ ಕೃಷಿ ಸಂಬಂಧಿತ ಸಾಲಗಳ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕುಮಾರಧಾರ ರೈತ ಉತ್ಪಾದನಾ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಫಾ| ಬಿಜು ಎಲ್.ಜಿ, ಮಂಗಳೂರು ಆರ್.ಎ.ಸಿ.ಸಿ.ನ ಶಾಖಾ ಮ್ಯಾನೆಜರ್ ವಿನಯ್ ಟಿ.ಜಿ, ಕಡಬ ಎಸ್.ಬಿ.ಐ. ಶಾಖಾ ಮ್ಯಾನೆಜರ್ ಮಹೇಶ್ ಪ್ರಸಾದ್ ರೆಡ್ಡಿ, ಕುಮಾರಧಾರ ರೈತ ಉತ್ಪನ್ನ ಕಂಪೆನಿಯ ನಿರ್ದೇಶಕರಾದ ಮನೋಜ್ ಕೋಡಿಂಬಾಳ, ಇ.ಎಸ್. ಸುಜನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಡಬ ರೈತ ಉತ್ಪಾದನಾ ಕಂಪೆನಿಯ ವ್ಯಾಪಾರಭಿವೃದ್ದಿಗೆ ಬ್ಯಾಂಕಿನಿಂದ ನೀಡಲಾದ ಹತ್ತು ಲಕ್ಷ ರೂಪಾಯಿ ಸಾಲದ ಚೆಕ್ನ್ನು ಟಿ.ವಿ ರವೀಂದ್ರ ಕುಮಾರ್ ಹಸ್ತಾಂತರಿಸಿದರು.