ಉಪ್ಪಿನಂಗಡಿ: ಇಲ್ಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ೨ನೇ ವಾರ್ಡುನಿಂದ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಷಾ ಚಂದ್ರ ಮುಳಿಯ ಮತ್ತು ೪ನೇ ವಾರ್ಡುನಿಂದ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಮೈಸಿದಿ ಇಬ್ರಾಹಿಂ ಗೆಲುವು ಸಾಧಿಸಿದ್ದಾರೆ. ಚುನಾವಣಾ ಫಲಿತಾಂಶ ಪ್ರಕಟವಾದ ಬುಧವಾರದ ಪತ್ರಿಕೆಯಲ್ಲಿ ಈ ಇಬ್ಬರ ಫೊಟೋ ಕಣ್ಣು ತಪ್ಪಿನಿಂದಾಗಿ ಪ್ರಕಟವಾಗಿರುವುದಿಲ್ಲ.