HomePage_Banner
HomePage_Banner
HomePage_Banner
HomePage_Banner

ಕೌಕ್ರಾಡಿ ಗ್ರಾ.ಪಂ.: ಬಿಜೆಪಿ ಬೆಂಬಲಿತರ ವಿಜಯೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: 18 ಸದಸ್ಯ ಬಲದ ಕೌಕ್ರಾಡಿ ಗ್ರಾ.ಪಂ.ನಲ್ಲಿ 11 ಸ್ಥಾನಗಳಲ್ಲಿ ಜಯಗಳಿಸಿ ಮತ್ತೆ ಅಧಿಕಾರ ಪಡೆದುಕೊಂಡಿರುವ ಬಿಜೆಪಿ ಬೆಂಬಲಿತರು ಡಿ.31ರಂದು ಬೆಳಿಗ್ಗೆ ವಿಜಯೋತ್ಸವ ಆಚರಿಸಿದರು.

ಗ್ರಾ.ಪಂ.ನಲ್ಲಿ ವಿಜೇತರಾದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಜನಾರ್ದನ ಮೂಡುಬೈಲು, ಮಹೇಶ್ ಪಟ್ಲಡ್ಕ, ಭವಾನಿ ಗುಂಡಿಮನೆ, ವನಿತಾ ಎಂ., ಪುಷ್ಪಾ ಹಳೆಮುಂಡ್ಲ, ಲೋಕೇಶ್ ಬಾಣಜಾಲು, ಸುಧಾಕರ ಜಿ ಗುತ್ತಿನಮನೆ, ದೇವಕಿ ದೋಂತಿಲ, ಉದಯಕುಮಾರ್ ಬರಮೇಲು, ಸಂಧ್ಯಾ ಪಿ.ಸಿ., ವಿಶ್ವನಾಥ ಗೌಡ ಕೊರಮೇರುರವರಿಗೆ ಹಾರಾರ್ಪಣೆ ಮಾಡಿ ಹೊಸಮಜಲುನಿಂದ ತೆರೆದ ವಾಹನದಲ್ಲಿ ನೆಲ್ಯಾಡಿ ಪೇಟೆ, ಕಟ್ಟೆಮಜಲು, ಇಚ್ಲಂಪಾಡಿ ತನಕ ತೆರಳಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಎಪಿಎಂಸಿ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಬಿಜೆಪಿ ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ಕೌಕ್ರಾಡಿ ಗ್ರಾ.ಪಂ.ನಿಕಟಪೂರ್ವ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮತ್ತಿತರರು ವಿಜಯೋತ್ಸವದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.