- ಬೆಳಿಯೂರುಕಟ್ಟೆ ಕಲ್ಲಕ್ಕಿನಾಯ ದೈವಸ್ಥಾನದಿಂದ ಬಲ್ನಾಡು ಉಳ್ಳಾಲ್ತಿ ದೈವಸ್ಥಾನಕ್ಕೆ ಕಾಲ್ನಡಿಗೆ
ಪುತ್ತೂರು: ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಲ್ನಾಡು ಪಂಚಾಯತ್ ನಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಬೆಳಿಯೂರುಕಟ್ಟೆ ಕಲ್ಲಕ್ಕಿನಾಯ ದೈವಸ್ಥಾನದಿಂದ ಬಲ್ನಾಡು ಉಳ್ಳಾಲ್ತಿ ದೈವಸ್ಥಾನಕ್ಕೆ ಪಾದಯಾತ್ರೆ ನಡೆಸುವುದಾಗಿ ಸಂಕಲ್ಪ ಮಾಡಿದಂತೆ ಜ.1ರಂದು ಅಮ್ಮನೆಡೆಗೆ ನಮ್ಮ ನಡಿಗೆ ಎಂಬ ಧ್ಯೇಯ ವಾಕ್ಯದಂತೆ ಪಾದಯಾತ್ರೆ ನಡೆಸಿದರು.
ಚುನಾವಣೆಗೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಾಮಪತ್ರ ಸಲ್ಲಿಸಿದ್ದರು. ಈ ಬಾರಿ ಬಲ್ನಾಡು ಪಂಚಾಯತ್ ನಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆದ ಅಧಿಕಾರಕ್ಕೆ ಬಂದಲ್ಲಿ ಕಲ್ಲಕ್ಕಿನಾಯ ದೈವಸ್ಥಾನದಿಂದ ಬಲ್ನಾಡು ಉಳ್ಳಾಲ್ತಿ ದೈವಸ್ಥಾನದ ತನಕ ಕಾಲ್ನಡಿಗೆ ನಡೆಸುವುದಾಗಿ ದೈವಸ್ಥಾನದಲ್ಲಿ ಸಂಕಲ್ಪ ಮಾಡಿದ್ದರು. ಅದರಂತೆ ಬೆಳಿಗ್ಗೆ ಬೆಳಿಯೂರುಕಟ್ಟೆ ಕಲ್ಲಕ್ಕಿನಾಯ ದೈವಸ್ಥಾನದಲ್ಲಿ ಪ್ರಾರ್ಥನೆ ನಡೆಸಿದ ಬಳಿಕ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಗ್ರಾಮ ಸಮಿತಿ ಅಧ್ಯಕ್ಷ ಅಕ್ಷಯ್ ಶೆಟ್ಟಿ ಯವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ನಡಿಗೆಯು ಬೆಳಿಯೂರುಕಟ್ಟೆ ಮುಖ್ಯರಸ್ತೆಯಿಂದಾಗಿ ದೇರಾಜೆ ಕ್ರಾಸ್ ಉಜ್ರುಪಾದೆ ರಸ್ತೆಯಾಗಿ ಬಲ್ನಾಡು ದೈವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಸಾಗಿದರು. ಬಲ್ನಾಡು ಗ್ರಾ.ಪಂ ಬಿಜೆಪಿ ಪಕ್ಷದ ಚುನಾವಣಾ ಉಸ್ತುವಾರಿಗಳಾದ ಚನಿಲ ತಿಮ್ಮಪ್ಪ ಶೆಟ್ಟಿ, ಜೀವಂಧರ್ ಜೈನ್, ನಗರ ಸಭಾ ಸದಸ್ಯೆ ಪೂರ್ಣಿಮಾ, ಗ್ರಾ.ಪಂನ ನೂತನ ಸದಸ್ಯರಾದ ಇಂದಿರಾ ಎಸ್ ರೈ, ಯಮುನಾ, ರವಿಚಂದ್ರ, ವಸಂತಿ ಹಸಂತಡ್ಕ, ಶೋಭಾ ಮುರುಂಗಿ, ಬಾಲಸುಬ್ರಹ್ಮಣ್ಯ, ಗಣೇಶ ಗೌಡ, ಪರಮೇಶ್ಚರಿ ಹಾಗೂ ಕೃಷ್ಣಪ್ಪ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.