ಕಡಬ: ಇಲ್ಲಿನ ತಾ.ಪಂ.ನ 2021ನೇ ಇಸವಿಯ ಡೈರಿಯನ್ನು ಜ.೧ರಂದು ಕಡಬ ತಾಲೂಕು ಪಂಚಾಯತ್ ಕಛೇರಿಯಲ್ಲಿ ಬಿಡುಗಡೆ ಮಾಡಲಾಯಿತು. ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ಡೈರಿಯನ್ನು ಬಿಡುಗಡೆಗೊಳಿಸಿ, ತಾಲೂಕಿನ ಜನತೆಗೆ ಹೊಸ ವರ್ಷದ ಶುಭಾಶಯ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಡಬ ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್, ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಉಪಾಧ್ಯಕ್ಷೆ ಜಯಂತಿ ಆರ್, ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ವೈ. ಕುಸುಮಾ, ತಾ.ಪಂ.ಮುಖ್ಯ ಕಾರ್ಯನಿವಾಹಣಾಧಿಕಾರಿ ನವೀನ್ ಭಂಡಾರಿ, ಸದಸ್ಯರಾದ ಆಶಾ ಲಕ್ಷ್ಮಣ್, ವಲ್ಸಮ್ಮ ಕೆ.ಟಿ., ತೇಜಶ್ವಿನಿ ಶೇಖರ ಗೌಡ, ಉಷಾ ಅಂಚನ್, ಶುಭದಾ ಎಸ್.ರೈ, ಗಣೇಶ್ ಕೈಕುರೆ, ಅಶೋಕ್ ನೆಕ್ರಾಜೆ, ತಾ.ಪಂ. ತಾ.ಪಂ. ವ್ಯವಸ್ಥಾಪಕ ಚೆನ್ನಪ್ಪ ಗೌಡ ಕಜೆಮೂಲೆ, ಐ.ಇ.ಸಿ ಸಂಯೋಜಕ ಭರತ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.