ವಿಟ್ಲ: ಕಬಕ – ವಿಟ್ಲ ರಸ್ತೆಯ ಕಂಬಳಬೆಟ್ಟುವಿನ ಎಸ್ಸಾರ್ ಪೆಟ್ರೋಲ್ ಬಂಕ್ ಸಮೀಪ ಜ.೧ ರಂದು ಆಕೃತಿ ಸಿಮೆಂಟ್ ಪ್ರಾಡೆಕ್ಟ್ಸ್ ಶುಭಾರಂಭಗೊಂಡಿತು. ಸಂಸ್ಥೆಯನ್ನು ಮಾಲಕರ ತಂದೆ ಸಂಸ್ಥೆಯ ಮಾಲಿಕರ ತಂದೆ ಶಿವರಾಮ ಗೌಡ ರವರು ದೀಪಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಕಚೇರಿಯನ್ನು ಇಡ್ಕಿದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೋಕುಲದಾಸ್ ಭಕ್ತರವರು ರಿಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.
ಕಂಬಳಬೆಟ್ಟು ಜುಮ್ಮಾ ಮಸ್ಜೀದ್ ನ ಮುದರಿಸ್ ಕೆ.ಇಬ್ರಾಹಿಂ ಮದನಿ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ, ವಿಟ್ಲ ಅರಮನೆಯ ಕೃಷ್ಣಯ್ಯ ವಿಟ್ಲ, ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ. ಎಸ್ ಸುರೇಶ್ ಮುಕ್ಕುಡ, ಉದ್ಯಮಿಗಳಾದ ವಿ. ಕೆ. ಅಬ್ದುಲ್ ಖಾದರ್, ವಿ.ಕೆ. ಅಶ್ರಫ್, ಲಿಂಗಪ್ಪ ಗೌಡ ಅಳಿಕೆ ಮೊದಲಾದವರು ಉಪಸ್ಥಿತರಿದ್ದರು.
ಜಯಂತ ಕೋಲ್ಪೆ ಪ್ರಾರ್ಥಿಸಿದರು. ಸಂಸ್ಥೆಯ ಮಾಲಕರಾದ ದಿನೇಶ್ ಕುಮಾರ್ ಮಾಡ್ತೇಲು ಸ್ವಾಗತಿಸಿದರು. ದಿನೇಶ್ ಮಾಮೇಶ್ವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಆದರ್ಶ್ ಸುಳ್ಯ, ದನಂಜಯ ಸುಳ್ಯ, ಜಯಂತ ಕೋಲ್ಪೆ, ಕೃಷ್ಣಪ್ಪ ಉರಿಮಜಲು,ರಾಮಣ್ಣ ಗೌಡ ಮಾಡ್ತೇಲು,ರಮೇಶ್ ಗೌಡ ಮಾಡ್ತೇಲು ಹಾಗೂ ಮಹೇಶ್ ಅತಿಥಿಗಳಿಗೆ ಹೂನೀಡಿ ಸ್ವಾಗತಿಸಿದರು.
ಮಾಲಕರ ತಾಯಿ ಕಲ್ಯಾಣಿ, ಪತ್ನಿ ಚೈತ್ರ, ಬಾವ ಆದರ್ಶ ಪಟೇಲ್ ಸುಳ್ಯ ಅಕ್ಕ ಪುಷ್ಪಲತಾ, ಸೊಸೆಯಂದಿರಾದ ಶಿವಾನಿ, ಶಿವಾಲಿ, ರಾಮಣ್ಣ ಗೌಡ ಮಾಡ್ತೇಲು, ಪದ್ಮನಾಭ ಗೌಡ ಸಾಕೊಟೆಮಾರು, ಸೀತಾರಾಮ ಗೌಡ ಸಾಕೊಟೆಮಾರು, ದನಂಜಯ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು.