ಉಪ್ಪಿನಂಗಡಿ: ಕರ್ನಾಟಕ ನಗರ ನೀರು ಸರಬರಾಜು & ಒಳಚರಂಡಿ ಮಂಡಳಿಯ ಬಂಟ್ವಾಳದ ಜಕ್ರೀಬೆಟ್ಟು ಯೋಜನೆಯಲ್ಲಿ ಮ್ಯಾನ್ ಮಜ್ದೂರಾಗಿ ಕರ್ತವ್ಯ ನಿರ್ವಹಿಸಿ ಸೇವಾ ನಿವೃತ್ತರಾದ 34ನೇ ನೆಕ್ಕಿಲಾಡಿ ನಿವಾಸಿ ಡಿ ಮಹಮ್ಮದ್ ರವರ ಬೀಳ್ಕೊಡುಗೆ ಸಮಾರಂಭ ಡಿಸೆಂಬರ್ 31ರಂದು ಕೆ.ಯು.ಡಬ್ಲ್ಯೂ.ಎಸ್ & ಡಿ.ಬಿ ಇದರ ಮಂಗಳೂರು ಉಪವಿಭಾಗ ಕಚೇರಿಯಲ್ಲಿ ನಡೆಯಿತು. ಸಮಾರಂಭದಲ್ಲಿ ಶಾಲು, ಸ್ಮರಣಿಕೆ, ಫಲಪುಷ್ಪ, ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು. ಇವರು ದಾರಂದಕುಕ್ಕುವಿನ ದಿವಂಗತ ಅಬೂಬಕ್ಕರ್ ಬ್ಯಾರಿ ಹಾಗೂ ದಿವಂಗತ ಖದೀಜಮ್ಮರ ಮೊದಲ ಪುತ್ರ. ನಿವೃತ್ತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಓರ್ವ ಸೊಸೆಯನ್ನು ಹೊಂದಿರುತ್ತಾರೆ.