ಪುತ್ತೂರು: ಶತಮಾನವನ್ನು ದಾಟಿದ ಕೊಂಬೆಟ್ಟು ಸರಕಾರಿ ಬೋರ್ಡ್ ಹೈಸ್ಕೂಲ್ ಕಟ್ಟಡ(ಈಗಿನ ಸರಕಾರಿ ಪ್ರೌಢಶಾಲೆ) ತರಗತಿ ಕೊಠಡಿಗಳ ಮಾಡಿನ ದುರಸ್ಥಿ ಕಾರ್ಯವು ಜ.೩ರಿಂದ ೭ ದಿನಗಳ ಕಾಲ ಸಪ್ತಾಹ ಮಾದರಿಯಲ್ಲಿ ತುರ್ತು ಕರಸೇವೆ ನಡೆಯಲಿದೆ. ಶಾಲೆಯ ಕಟ್ಟಡ ಪ್ರಾಚ್ಯ ಇಲಾಖೆಗೆ ಸೇರಿದ್ದು ಗಟ್ಟಿಮುಟ್ಟಾದ ಕಟ್ಟಡವಿದ್ದರೂ ಎರಡು ಮೂರು ತರಗತಿಗಳ ಹಂಚುಗಳು ಮತ್ತು ರೀಪುಗಳು ಹಾನಿಗೊಂಡಿದೆ. ಇದರ ತುರ್ತು ಕಾಯಕಲ್ಪ ಆಗಬೇಕಾಗಿದೆ. ಈ ನಡುವೆ ಈಗಾಗಲೇ ಸರಕಾರದ ಸೂಚನೆಯಂತೆ ವಿದ್ಯಾಗಮ ತರಗತಿಗಳು ಆರಂಭಗೊಂಡಿದೆ. ಹಾಗಾಗಿ ಹಿರಿಯ ವಿದ್ಯಾರ್ಥಿಗಳು ಸೇರಿಕೊಂಡು ಒಂದು ವಾರದ ಕರಸೇವೆ ಮಾಡಲಿದ್ದಾರೆ. ಈ ಕರಸೇವೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಲೆಯ ಆಡಳಿತ ಮಂಡಳಿ ಮತ್ತು ಉಪಪ್ರಾಂಶುಪಾಲರು ವಿನಂತಿಸಿದ್ದಾರೆ. ಆಯ್ದ ಕೆಲಸಕ್ಕೆ ಸಂಬಂಧಿಸಿ ನುರಿತ ಪರಿಣತರಿದ್ದರೆ ಕರಸೇವೆಗೆ ತಂಡ ರಚನೆ ಮಾಡಲಾಗುವುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ತಿಳಿಸಿದ್ದಾರೆ.