HomePage_Banner
HomePage_Banner
HomePage_Banner
HomePage_Banner

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾಇಗಳ ಆಯ್ಕೆ ಪ್ರಕ್ರಿಯೆ ಸತ್ತಿಕಲ್ಲ್ ತಾಜುಲ್ ಉಲಮಾ ಮದರಸದಲ್ಲಿ ಡಿ.22ರಂದು ನಡಯಿತು. ನಿಕಟಪೂರ್ವ ಸೆಕ್ಟರ್ ಉಪಾಧ್ಯಕ್ಷ ಸಯ್ಯಿದ್ ಸಾಬಿತ್ ತಂಙಳ್ ರವರ ದುಆ ಮಾಡಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಕಲಂದರ್ ಪಾಟ್ರಕೋಡಿಯವರು ವಾರ್ಷಿಕ ವರದಿ ವಾಚಿಸಿದರು. ಸೆಕ್ಟರ್ ಕೋಶಾಧಿಕಾರಿ ಸಿದ್ದೀಕ್ ಪೆರ್ನೆ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಸ್ವಾದಿಕ್ ಮುಈನಿ ಗಡಿಯಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ನಿಂದ ಚುನಾವಣಾ ವೀಕ್ಷಕರಾಗಿ ಆಗಮಿಸಿದ ಹಮೀದ್ ಸಖಾಫಿ ಹಾಗೂ ಮಜೀದ್ ಕಬಕ ರವರ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ಹಮೀದ್ ಸಖಾಫಿ ಉಸ್ತಾದರು ಸಂಘಟನಾ ತರಗತಿ ನಡೆಸಿದರು. ಬಳಿಕ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಅಧ್ಯಕ್ಷರಾಗಿ ಸಯ್ಯಿದ್ ಸಾಬಿತ್ ಸಖಾಫಿ ಅಲ್‌ಮುಈನಿ ತಂಙಳ್ ಪಾಟ್ರಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಸತ್ತಿಕ್ಕಲ್, ಕೋಶಾಧಿಕಾರಿಯಾಗಿ ಅನ್ಸಾರ್ ಸತ್ತಿಕ್ಕಲ್, ಉಪಾಧ್ಯಕ್ಷರುಗಳಾಗಿ ಜಾಬಿರ್ ಸಅದಿ ಗಡಿಯಾರ್, ಹಾರಿಸ್ ಕೆಮ್ಮಣ್, ಕಾರ್ಯದರ್ಶಿಗಳಾಗಿ ಸಾಬಿತ್ ಪಾಟ್ರಕೋಡಿ, ಅಝೀಝ್ ಸತ್ತಿಕ್ಕಲ್, ಕ್ಯಾಂಪಸ್ ಕಾರ್ಯದರ್ಶಿಯಾಗಿ ಜಾಬಿರ್ ಸೂರಿಕುಮೇರ್ ಆಯ್ಕೆಗೊಂಡರು.


ಕಾರ್ಯಾಕಾರಿ ಸಮಿತಿ ಸದಸ್ಯರುಗಳಾಗಿ ಹಾಫಿಳ್ ತೌಸೀಫ್ ಅಸ್ ಅದಿ ಕೆಮ್ಮಣ್, ಸ್ವಾದಿಕ್ ಮು ಈನಿ ಗಡಿಯಾರ್, ಕಲಂದರ್ ಪಾಟ್ರಕೋಡಿ, ಸಿದ್ದೀಕ್ ಪೆರ್ನೆ, ಹಫೀಝ್ ಪೆರ್ನೆ, ಉಸೈದ್ ಮುಸ್ಲಿಯಾರ್ ಸೂರ್ಯ, ನವಾಝ್ ಸೂರ್ಯ, ಮುಸ್ತಫಾ ಬುಡೋಳಿ, ಸಿನಾನ್ ಬುಡೋಳಿ, ಮುಬಶ್ಶಿರ್ ಮುಸ್ಲಿಯಾರ್ ಸೂರಿಕುಮೇರ್, ಮುಹಮ್ಮದ್ ಅಲಿ ಶೇರ ಬರಿಮಾರ್, ಲತೀಫ್ ಸಅದಿ ನೇರಳಕಟ್ಟೆ, ಮಿಕ್‌ದಾದ್ ನೇರಳಕಟ್ಟೆ,ಶಂಸುದ್ದೀನ್ ಶೇರ ಬರಿಮಾರ್ ಆಯ್ಕೆಯಾದರು.

ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಕೋಶಾಧಿಕಾರಿಯಾಗಿದ್ದ ಕಲಂದರ್ ಬುಡೋಳಿಯವರು ಎಸ್‌ವೈಎಸ್ ಗೆ ಪಾದಾರ್ಪಣೆ ಮಾಡುವ ಹಿನ್ನಲೆಯಿಂದ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರು ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿ ನೌಫಲ್ ಸತ್ತಿಕ್ಕಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.