ಪುತ್ತೂರು :ಸ. ಮಾ. ಉ. ಹಿ. ಪ್ರಾ. ಶಾಲೆ ಹಾರಾಡಿಯಲ್ಲಿ ವಿದ್ಯಾಗಮ ಆರಂಭೋತ್ಸವ ವವನ್ನು ನಗರ ಸಭಾ ಸದಸ್ಯೆ ಪ್ರೇಮಲತಾ ಜಿ ಇವರು ಮಕ್ಕಳ ಕೈಗೆ ಸ್ಯಾನಿಟೈಜರ್ ಹಾಕಿ ಶುಭಹಾರೈಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ನಾಯ್ಕ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಪ್ರಭಾರ ಮುಖ್ಯ ಶಿಕ್ಷಕಿ ಪ್ರಿಯಾ ಸ್ವಾಗತಿಸಿದರು. ಸಹಶಿಕ್ಷಕಿ ರಾಜೇಶ್ವರಿ ವಂದಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.