HomePage_Banner
HomePage_Banner
HomePage_Banner
HomePage_Banner

ದ.ಕ.ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರ ಸಂಘದ ಕಛೇರಿ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ರಾಜ್ಯ ಮಟ್ಟಕ್ಕೆ ವಿಸ್ತಾರಗೊಂಡು ಸೇವೆ ನೀಡಲಿ-ತಿಮ್ಮಪ್ಪ ನಾಯ್ಕ


ಪುತ್ತೂರು : ಕೆಲ ತಿಂಗಳ ಹಿಂದೆ ಪ್ರಾರಂಭಗೊಂಡಿರುವ ಸಂಘದಲ್ಲಿ ಅನುಭವಿ, ಸಮರ್ಥ ವ್ಯಕ್ತಿಗಳು ಇದ್ದಾರೆ. ಎಲ್ಲಾ ವರ್ಗದ ಜನತೆಗೂ ಅತ್ತ್ಯುತ್ತಮ ವಾದ ಸೇವೆ ನೀಡುತ್ತಾ,ಮುಂಬರುವ ದಿನಗಳಲ್ಲಿ ಸ್ವಂತ ಕಟ್ಟಡ ಹೊಂದಿ ಎಲ್ಲಾ ಕೃಷಿ ಕಾರ್ಮಿಕರಿಗೂ ಇ ಸಹಕಾರಿ ಸಂಘದ ಪ್ರಯೋಜನ ಪಡೆದುಕೊಳ್ಳುವಂತ ಕೆಲಸವಾಗಬೇಕು ಹಾಗೂ ರಾಜ್ಯದ್ದೂದಕ್ಕೂ ವಿಸ್ತಾರಗೊಂಡು ಸೇವೆ ಒದಗಿಸುವ ಕಾರ್ಯವಾಗಲಿಯೆಂದು ಮಹಿಳಾ ಠಾಣಾ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ ಹೇಳಿದರು. ಜ.೧ರಂದು ಎಮ್.ಟಿ. ರಸ್ತೆ ಕಾಮಧೇನು ಕಟ್ಟಡದಿಂದ ಸ್ಥಳಾಂತರ ಗೊಂಡು ,ಹೂ ಮಾರುಕಟ್ಟೆ ಬಳಿಯ ಅಮರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡ ಜಿಲ್ಲಾ ಕೃಷಿ ಕಾರ್ಮಿಕರ ಸಹಕಾರ ಸಂಘದ ಉದ್ಘಾಟನೆ ನೇರವೇರಿಸಿ, ದೀಪ ಪ್ರಜ್ವಲನೆ ಮಾಡಿ ಅಭಿನಂದಿಸಿದರು. ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡ್ ಕ್ಯಾಶ್ ಕೌಂಟರ್ ಉದ್ಘಾಟಿಸಿ ಮಾತನಾಡಿ ನಮ್ಮಲಿ ಸುಮಾರು ೭೫% ಜನ ಕೃಷಿಕರಾಗಿದ್ದಾರೆ, ಹಿರಿಯ ನಾಗರಿಕರು ಹಾಗೂ ಕಾರ್ಮಿಕ ವರ್ಗದವರು ಇಂಥಹ ಸಂಘವನ್ನು ಸೇರಿ ಕೊಂಡಾಗ ಜೀವನ ನಿರ್ವಹಣೆಯು ತುಂಬಾನೇ ಸುಲಲಿತವಾಗಿ ಅಭಿವೃದ್ಧಿ ಹೊಂದಲು ಸಾಧ್ಯ.ಸಂಸ್ಥೆಯ ಸಹಕಾರ ಮನೋಭಾವದಿಂದ ಜನತೆಯ ಬದುಕು ಹಸಿರು ಹೆಮ್ಮರವಾಗಿ, ಕಾರ್ಮಿಕ ವರ್ಗಕ್ಕೆ ಆಶಾದಾಯಕ ವಾಗಲಿಯೆಂದು ಹೇಳಿದರು. ಉಪಾಧ್ಯಕ್ಷ ಮಹಾವೀರ್ ಜೈನ್ ಅಧ್ಯಕ್ಷರ ಕೊಠಡಿಯ ಉದ್ಘಾಟನೆಯನ್ನು, ನ್ಯಾಯವಾದಿ ಹರೀಶ್ ನಿರ್ದೇಶಕರ ಕೊಠಡಿ ಉದ್ಘಾಟನೆ, ನಾಮಫಲಕ ಅನಾವರಣ ನಿರ್ದೇಶಕ ರವೀಂದ್ರನಾಥ ಕಲ್ಲೂರಾಯ ರವರು ನೆರವೇರಿಸಿದರು.


ಸನ್ಮಾನ
: ಸರ್ಕಲ್ ಇನ್ಸ್‌ಪೆಕ್ಟರ್ ತಿಮ್ಮಪ್ಪ ನಾಯ್ಕ, ಚಂದ್ರಹಾಸ ರೈ ಕೊಡಂಕೇರಿ, ಗುರುವ ಧರ್ಮ ನಗರ ಪುರುಷರ ಕಟ್ಟೆ ಸಂಸ್ಥೆ ಸಿಬ್ಬಂದಿ ಸತೀಶ್ ಹಾಗೂ ಧನ್ಯ ಇವರನ್ನು ಸಂಸ್ಥೆ ಯ ವತಿಯಿಂದ ಸನ್ಮಾನಿಸಲಾಯಿತು, ಸ್ವ ಸಹಾಯ ಸಂಘ ಸದಸ್ಯರಾದ ಅಮೃತಾ ಕುಂಜೂರು ಪಂಜ, ಹರೀಶ್ ಕುಮಾರ್ ಸಹಿತ ಮೂವರಿಗೆ ಸಂಘದ ಪುಸ್ತಕ ವನ್ನು ಸರ್ಕಲ್ ತಿಮ್ಮಪ್ಪ ನಾಯ್ಕ ವಿತರಣೆ ಮಾಡಿದರು.

ನಿರ್ದೇಶಕರುಗಳಾದ ವಿಶ್ವನಾಥ ಪೂಜಾರಿ, ಗಣೇಶ್ ಹೆಗ್ಡೆ, ಹರ್ಷೇಂದ್ರ ಕುಮಾರ್ ಜೈನ್, ರಾಮ ಆಚಾರ್ಯ, ಪ್ರಸನ್ನ ಕುಮಾರ್, ಚೆನ್ನಪ್ಪ ಗೌಡ, ಗಂಗಾಧರ್ ನಾಯ್ಕ , ಕವಿತಾ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಸಂಘದ ಸ್ಥಾಪಕ ಅಧ್ಯಕ್ಷೆ ಸುಮತಿ ಎಸ್ ಹೆಗ್ಡೆ, ನಿರ್ದೇಶಕ ಶಿವಾನಂದ, ಸತೀಶ್ ಪುರುಷರಕಟ್ಟೆ, ಪ್ರಿಯಾ ಸಾಲ್ಯಾನ್, ಸಿಬ್ಬಂದಿ ಧನ್ಯ ಅತಿಥಿಗಳನ್ನು ಸ್ವಾಗತಿಸಿದರು, ನಿರ್ದೇಶಕ ರಾಜು ಹೊಸ್ಮಠ ಕಾರ್ಯಕ್ರಮ ನಿರ್ವಹಿಸಿದರು.

ಅತ್ಯುತ್ತಮ ರೀತಿಯಲ್ಲಿ ಜನತೆಗೆ ಉತ್ಕೃಷ್ಟ ಸೇವೆಯೊಡನೆ, ವಾಹನ, ಗೃಹ, ಚಿನ್ನದ ಮೇಲಿನ ಸಾಲ ಜೊತೆಗೆ ಹಿರಿಯ ನಾಗರಿಕರಿಗೆ ಠೇವಣಿ ಮೇಲೆ ೧% ಅಧಿಕ ಬಡ್ಡಿ ಹಾಗೂ ಪಿಗ್ಮಿ ಸಂಗ್ರಹಣೆಗೂ ಕೂಡ ಪರ್ಸೆಂಟೆಜ್ ಅಧಿಕ ನೀಡುತ್ತವೆ, ಎಲ್ಲರೂ ಸಂಸ್ಥೆಯ ಏಳಿಗೆಗೆ ಸಹಕರಿಸಿ.ಸುಮತಿ ಎಸ್ ಹೆಗ್ಡೆ, ಸ್ಥಾಪಕಾಧ್ಯಕ್ಷೆ  ಜಿಲ್ಲಾ ಕೃಷಿ ಕಾರ್ಮಿಕರ ಸ.ಸಂ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.