ಪುತ್ತೂರು: ಕೊಯಿಲ- ಬಡಗನ್ನೂರು 3ನೇ ವಾರ್ಡ್ ನಲ್ಲಿ ಮೂರು ಸ್ಥಾನವನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಶಕ್ಕೆ ಪಡೆದುಕೊಂಡು ಜಯಭೇರಿ ಸಾದಿಸಿದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಿದರು. ಜಯಗಳಿಸಿದ ಅಭ್ಯರ್ಥಿಗಳಿಗೆ, ಪಕ್ಷಕ್ಕೆ ಜೈಕಾರ ಹಾಕುತ್ತಾ ಸುಳ್ಯಪದವು, ಮೈಂದನಡ್ಕ ರಸ್ತೆ ಮೂಲಕ ಮುಡಿಪಿನಡ್ಕ ,ಪಟ್ಟೆ ಮಾರ್ಗವಾಗಿ ನೇರೊಳ್ತಡ್ಕ ವರೆಗೆ ವಾಹನ ಜಾಥ ನಡೆಸಿ ವಿಜಯೋತ್ಸವ ಆಚರಿಸಿದರು .