ಪುತ್ತೂರು: ಪುತ್ತೂರು ಕೈಗಾರಿಕಾ ಸಂಘದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ಶಿವಶಂಕರಭಟ್ರವರ ಅಧ್ಯಕ್ಷತೆಯಲ್ಲಿ ಡಿ.31ರಂದು ನಡೆಯಿತು. ಸಂಘದ ಅಧ್ಯಕ್ಷ ಮೋಹನ್ ಸಿಮಾರ್ ಬೊಳ್ಳಾಡಿ ಸ್ವಾಗತಿಸಿ 2019-20ನೇ ಸಾಲಿನ ಪರಿಶೋಧಿತ ಲೆಕ್ಕ ಪತ್ರಗಳನ್ನು ಖಜಾಂಜಿ ಮಹಮ್ಮದ್ ಸಾದಿಕ್ರವರ ಅನುಪಸ್ಥಿತಿಯಲ್ಲಿ ಮಂಡಿಸಿದರು.
ಸಭೆಯಲ್ಲಿ 2020-21ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಅಧ್ಯಕ್ಷರಾಗಿ ಶಿವಶಂಕರ್ ಭಟ್, ಉಪಾಧ್ಯಕ್ಷರಾಗಿ ಜಗನ್ನಾಥ ರೈ ಸುಳ್ಯ ಮತ್ತು ಕೇಶವ ಪುತ್ತೂರು, ಕಾರ್ಯದರ್ಶಿಯಗಿ ಮೋಹನ್ ಕುಮಾರ್ ಬೊಳ್ಳಾಡಿ, ಉಪಕಾರ್ಯದರ್ಶಿಯಾಗಿ ಮಾಧವ ಪೂಜಾರಿ, ಖಜಾಂಜಿ ಗಣೇಶ್ ಶೆಟ್ಟಿ ಆಯ್ಕೆಯಾದರು. ಸದಸ್ಯರುಗಳಾಗಿ ಅಬ್ದುಲ್ ರಹಿಮಾನ್ ಯಾಸಿಕ್ ಉಪ್ಪಿನಂಗಡಿ, ಕೆ.ಆರ್. ಮಹ್ಮದ್ ಸಾದಿಕ್, ಟಿ.ವಿ ರವೀಂದ್ರನ್, ಪ್ರೇಮಾನಂದ ಡಿ, ಕೇಶವ ಭಟ್ ಕಮ್ಮಾಜೆ, ವಿಶ್ವಪ್ರಸಾದ್ ಸೇಡಿಯಾಪು, ಕೃಷ್ಣವೇಣಿ, ಅನಿತ ಉದಯ ಕುಮಾರ್, ಪ್ರಸನ್ನ ಕುಮಾರ್ ರೈ, ಸೂರ್ಯನಾಥ ಆಳ್ವ, ಪದ್ಮನಾಭ ಶೆಟ್ಟಿ, ರೂಪೇಶ್ ಕುಮಾರ್(ರೂಪೇಶ್)ರವರನ್ನು ಆಯ್ಕೆಮಾಡಲಾಯಿತು. ವಿಶ್ವಪ್ರಸಾದ್ ಸೇಡಿಯಾಪುರವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕೈಗಾರಿಕೆಗಳ ಅಭಿವೃದ್ಧಿ ಮತ್ತು ಇತರ ಸಂಬಂಧಪಟ್ಟ ವಿಷಯಗಳನ್ನು ಚರ್ಚಿಸಲಾಯಿತು. ಟಿ.ವಿ ರವೀಂದ್ರನ್ ಪ್ರಾರ್ಥಿಸಿ ವಿಶ್ವಪ್ರಸಾದ್ ಸೇಡಿಯಾಪು ವಂದಿಸಿದರು.