ಪುತ್ತೂರು: ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9 ನೇ ತರಗತಿ ವಿದ್ಯಾರ್ಥಿನಿ ಯೊಬ್ಬರು ಶಾಲೆಗೆ ಹೋಗುವುದಾಗಿ ಹೇಳಿ ಮನೆಯ ಪಕ್ಕದ ಗೇರು ಬೀಜ ಗುಡ್ಡೆಯಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮಾಡಾವು ನಿವಾಸಿ ರಾಮ ಎಂಬವರ ಪುತ್ರಿ ದಿವ್ಯಾ. ಶಾಲಾ ಸಮವಸ್ತ್ರದ ವೇಲ್ ನ್ನು ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.