HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ: ಪದ್ಮನಾಭ ಭರಣ್ಯರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಬೆಟ್ಟಂಪಾಡಿ: ಇತ್ತೀಚೆಗೆ ಅವಘಡದಲ್ಲಿ ಮೃತಪಟ್ಟ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ, ಭಜನಾ ಸಂಘಗಳ ಸಂಘಟಕ ಪದ್ಮನಾಭ ಭರಣ್ಯರವರಿಗೆ ಶ್ರದ್ಧಾಂಜಲಿ ಸಭೆ ಜ. 2 ರಂದು ಬೆಳಿಗ್ಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಿತು.

ದೈಹಿಕ ಶಿಕ್ಷಣ ಶಿಕ್ಷಕ‌ ಕೃಷ್ಣಪ್ರಸಾದ್ ಬೆಟ್ಟಂಪಾಡಿರವರು ಮೃತ ಪದ್ಮನಾಭರವರ ಗುಣಗಾನ ಮಾಡಿದರು. ಸರಳತೆ ಮತ್ತು ಸಜ್ಜನಿಕೆಗೆ ಪಾತ್ರವಾಗಿದ್ದ ಪದ್ಮನಾಭರವರು ತಮ್ಮ ಬದುಕಿನಲ್ಲಿ ಸಮಾಜಕ್ಕೆ ಓರ್ವ ಪ್ರೀತಿಪಾತ್ರನಾಗಿ ಹಲವು ಸಮಾಜಮುಖಿ ಕಾರ್ಯ ಚಟುವಟಿಕೆಗಳ ಮೂಲಕ ಶ್ರೇಷ್ಟರಾಗಿ ಮೆರೆದವರು. ಜಾತಿ, ವೃತ್ತಿಗಿಂತಲೂ ವ್ಯಕ್ತಿಯೋರ್ವ ಶಕ್ತಿಯಾಗಿ‌ ಹೇಗೆ ಸಮಾಜದಲ್ಲಿ ಗುರುತಿಸಬಲ್ಲರು ಎಂಬುದಕ್ಕೆ ಪದ್ಮನಾಭರವರು ಉತ್ತಮ‌ ನಿದರ್ಶನದ ವ್ಯಕ್ತಿ’ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಬಲ್ಲಾಳ್,‌ಪದಾಧಿಕಾರಿಗಳು, ಸದಸ್ಯರು, ಆರ್.ಎಸ್.ಎಸ್. ಸ್ವಯಂಸೇವಕರು ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಸಭೆಯಲ್ಲಿ ಪಾಲ್ಗೊಂಡು ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.