ಪುತ್ತೂರು: ತೋಟದಲ್ಲಿ ಕೃಷಿಕರು ಕೆಲಸ ಮಾಡುವಾಗ ಮತ್ತು ವಿದ್ಯುತ್ ಅಥವಾ ಉಪಕರಣದ ಮೇಲೆ ಕೆಲಸ ಮಾಡುವಾಗ ಲ್ಯಾಡರ್ ಸುರಕ್ಷತೆಯನ್ನು ಗಮನಿಸುವುದು ಅತೀ ಅಗತ್ಯ. ಇಂತಹ ಸುರಕ್ಷತೆಯೊಂದಿಗೆ ಬಹಳ ಹಿಂದೆ ಮರದ ಏಣಿಗಳ ಬಳಕೆ ಇದ್ದರೂ ಆಧುನಿಕತೆಯಲ್ಲಿ ಕಡಿಮೆಯಾಗಿ ಅಲ್ಯೂಮಿನಿಯಂ ಏಣಿಗಳಾಗಿ ಅವಿಷ್ಕಾರಗೊಂಡವು. ಆದರೆ ಏಣಿ ಬಳಕೆಯಲ್ಲಿ ವಿದ್ಯುತ್ನಿಂದ ಸುರಕ್ಷತೆ ಪಡೆಯಲು ಪುತ್ತೂರಿನ ಎಸ್.ಆರ್.ಕೆ. ಲ್ಯಾಡರ್ಸ್ನ ಮಾಲಕ ಕೇಶವ ಎ ಅವರು ತನ್ನ ತಂತ್ರಜ್ಞಾನದಿಂದ ಸಂಪೂರ್ಣವಾಗಿ ಪೈಬರ್ನಿಂದ ತಯಾರಿಸಲ್ಪಟ್ಟ ಹೊಸ ಮಾದರಿಯ ಏಣಿ ಮತ್ತು ದೋಂಟಿಯನ್ನು ಆವಿಷ್ಕಾರ ಮಾಡಿದ್ದಲ್ಲದೆ ಮಾರುಕಟ್ಟೆಗೂ ಬಿಡುಗಡೆ ಮಾಡಿದ್ದಾರೆ.

ಬಾಲ್ಯದಿಂದಲೇ ಕೃಷಿಕರ ಸಮಸ್ಯೆಗಳನ್ನು, ಕೃಷಿ ಚಟುವಟಿಕೆಗಳ ನಿರ್ವಹಣೆಯಲ್ಲಿರುವ ಕುಂದುಕೊರತೆಗಳನ್ನು ಅರಿತುಕೊಳ್ಳುತ್ತಾ ಬಂದ ಇವರು ಅವುಗಳಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ, ಕಂಡುಕೊಳ್ಳುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಕೃಷಿಕರು ಒಯ್ಯುವ ಏಣಿ ಅಥವಾ ದೋಂಟಿ ತೋಟದ ನಡುವೆ ಹಾದು ಹೋಗುವ ವಿದ್ಯುತ್ ತಂತಿಗಳಿಗೂ ಸ್ಪರ್ಶಿಸಿದರೂ ಯಾವುದೇ ಅವಘಡ ಆಗದಂತೆ ಸಂಪೂರ್ಣವಾಗಿ ಪೈಬರ್ನಿಂದ ತಯಾರಿಸಲ್ಪಟ್ಟ ಹಗುರ ಮತ್ತು ಸದೃಢವಾದ ಏಣಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಮೂರು ವಿನ್ಯಾಸಗಳಲ್ಲಿ ಇರುವ ಈ ಏಣಿಯಲ್ಲಿ ವಿದ್ಯುತ್ ಪ್ರವಾಹಿಸುವುದಿಲ್ಲ. ಇದರಲ್ಲಿ ಇಬ್ಬರು ಅಥವಾ ನಾಲ್ಕು ಮಂದಿ ಏಕಕಾಲದಲ್ಲಿ ಎಣಿ ಏರಿ ನಿಂತರು ಏಣಿ ಮುರಿಯುವುದಿಲ್ಲ. ೨೦ ಮತ್ತು ೧೦ ಅಡಿಯಲ್ಲಿ ಏಣಿ ಲಭ್ಯವಿದೆ. ಇದರಲ್ಲಿ ೫೦ mm ಫೈಬರ್ ಪೈಪ್ ಗೆ ಊಆPಇ ಸ್ಟೆಪ್ ಗಳು ,೭೦ mm ಫೈಬರ್ ಪೈಪ್ ಗೆ HDPE ಅಥವಾ ಅಲ್ಯೂಮಿನಿಯಂ ಸ್ಟೆಪ್ ಗಳನ್ನು ವಿರುದ್ಧ ಧಿಕ್ಕಿಗೆ ಸಮಾನಾಂತರವಾಗಿ ಜೋಡಿಸಲಾಗಿದೆ.
ಹಗುರವಾದ ದೋಂಟಿ:
ದೋಂಟಿಯೂ ಕೂಡಾ ತುಂಬಾ ಹಗುರವಾಗಿದ್ದು ಇದನ್ನೂ ಕೂಡಾ ಪೈಬರ್ನಿಂದ ತಯಾರಿಸಲಾಗಿದೆ. ಈ ಪೈಪ್ನಲ್ಲೂ ವಿದ್ಯುತ್ ಪ್ರವಾಹಿಸುವುದಿಲ್ಲ. ಇದು ಏರಿಯಲ್ ಮಾದರಿಯಲ್ಲಿದ್ದು, ೩೦ ಅಡಿಗಳ ವರೆಗೂ ಉದ್ದನೆ ಮಾಡುವ ವ್ಯವಸ್ಥೆ ಇರುತ್ತದೆ .ತೋಟದ ನಡುವೆ ಯಾವುದೇ ವಯಸ್ಸಿನವರಿಗೂ ಸುಲಭವಾಗಿ ಸಾಗಿಸಬಹುದಾಗಿದೆ. ಇದರ ತುದಿಯಲ್ಲಿ ಕಳಚಿಡಬಹುದಾದ ಅಡಿಕೆ ಕೊಯ್ಯುವ ಕತ್ತಿಯು ಲಭ್ಯವಿರುತ್ತದೆ. ಒಂದೇ ಉದ್ದನೆಯಲ್ಲಿ ೧೦ ಅಡಿ, ೧೨ ಅಡಿ, ೧೬ ಅಡಿ, ೧೮ ಅಡಿ ಮತ್ತು ೩೦ ಅಡಿಗಳಲ್ಲಿ ಲಭ್ಯವಿದೆ. ಹಾಗಾಗಿ ಏಣಿ ಅಥವಾ ದೋಂಟಿ ಅಗತ್ಯತೆ ಉಳ್ಳವರಿಗೆ ತಲುಪಿಸುವ ವ್ಯವಸ್ಥೆಯೂ ಎಸ್.ಆರ್.ಕೆ. ಲ್ಯಾಡರ್ಸ್ ಮಾಡಲಿದೆ. ಏಣಿಗಳು ಬೇಕಾದಲ್ಲಿ ಮುಕ್ರಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಎಸ್.ಆರ್.ಕೆ.ಲ್ಯಾಡರ್ಸ್ನ್ನು ಸಂಪರ್ಕಿಸಬಹುದು. ಅಥವಾ ಮೊಬೈಲ್: 9448443404, 8277300444 ಅನ್ನು ಸಂಪರ್ಕಿಸುವಂತೆ ಎಸ್.ಆರ್.ಕೆ.ಲ್ಯಾಡರ್ಸ್ನ ಕೇಶವ ಎ ಅವರು ತಿಳಿಸಿದ್ದಾರೆ.
ಒಂದೇ ಲೆಂತ್ನಲ್ಲಿ ೧೦ ಅಡಿ, ೧೨ ಅಡಿ, ೧೬ ಅಡಿ , ೧೮ ಅಡಿ ಮತ್ತು ೨೦ ಅಡಿಗಳಲ್ಲಿ ಡೋಂಟಿಗಳು ಮತ್ತು ಏರಿಯಲ್ ಮಾದರಿಯಲ್ಲಿ ೩೦ ಅಡಿಗಳ ವರೆಗೆ ಲಭ್ಯವಿದ್ದು, ಇದನ್ನು ಉಪಯೋಗಿಸುವಾಗ ನೀರು ಮತ್ತು ಇಬ್ಬನಿಯನ್ನು ಗಮನಿಸಬೇಕು. ನೀರಿನಲ್ಲಿ ವಿದ್ಯುತ್ ಪ್ರವಾಹವಾಗುತ್ತದೆ ಎಂಬ ಎಚ್ಚರಿಕೆ ಇರಬೇಕು.
ಹೆಲೆನ್ ಕೆಲ್ಲರ್ಅವರು ಹೇಳಿರುವ ಮಾತುಗಳಿವು- ‘ದೃಷ್ಟಿಯಿಲ್ಲದೆ ಬದುಕುವುದು ಕೆಟ್ಟದಲ್ಲ. ದೂರದೃಷ್ಟಿಯಿಲ್ಲದೆ ಬದುಕುವುದು ಎಲ್ಲದಕ್ಕಿಂತ ಕೆಟ್ಟದ್ದು.’ ಹೌದು, ಬದುಕಿನ ಬಗೆಗಿನ ದೂರದರ್ಶಿತ್ವವನ್ನು ಇಟ್ಟುಕೊಂಡವರನ್ನು ಯಾವುದೇ ಬಗೆಯ ನ್ಯೂನ್ಯತೆಗಳು, ಕೊರತೆಗಳು ಬಾಧಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ ನಮ್ಮ ಮುಂದಿರುವವರು ಎಸ್. ಆರ್. ಕೆ.ಲ್ಯಾಡರ್ಸ್ನ ಕೇಶವರವರು. ಇವರಿಗೆ ದೃಷ್ಟಿದೋಷವಿದೆ ನಿಜ. ಆದರೆ ತಮ್ಮ ಬದುಕಿನುದ್ದಕ್ಕೂ ದೂರದೃಷ್ಟಿಯನ್ನು ಇರಿಸಿಕೊಂಡು ಜೀವನ ನಡೆಸಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.
ಪೊಟೋ: ಎಸ್ಆರ್ಕೆ ೧( ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಮೆಚ್ಚುಗೆ), ೨ , ೩