HomePage_Banner
HomePage_Banner
HomePage_Banner
HomePage_Banner
Breaking News

ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಮಹಾಸಭೆ | ನೂತನ ಪದಾಧಿಕಾರಿಗಳ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಎಸ್ಸೆಸ್ಸೆಫ್ ಪುತ್ತೂರು ಸೆಕ್ಟರ್ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಡಿ.27ರಂದು ಪುತ್ತೂರು ಸುನ್ನೀ ಸೆಂಟರ್‌ನಲ್ಲಿ ನಡೆಯಿತು. ಸೆಕ್ಟರ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಶಿಹಾಬುರ್ರಹಿಮಾನ್ ಹಸನ್ ನಗರ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಸೈಫುಲ್ಲಾ ಸಅದಿ ಬನ್ನೂರು ವಾರ್ಷಿಕ ಆಯವ್ಯಯ ಪತ್ರ ವಾಚಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. 2021-22ನೇ ಸಾಲಿನ ಸೆಕ್ಟರ್ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಸಖಾಫಿ ಹಸನ್ ನಗರ, ಪ್ರ.ಕಾರ್ಯದರ್ಶಿಯಾಗಿ ಅಶ್ರಫ್ ಕಬಕ, ಕೋಶಾಧಿಕಾರಿಯಾಗಿ ಮುನೀರ್ ಬೀಟಿಗೆ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಮುಹಮ್ಮದ್ ಬಾತೀಶ್ ಬನ್ನೂರು, ಉಪಾಧ್ಯಕ್ಷರುಗಳಾಗಿ ಸೈಫುಲ್ಲಾ ಸಅದಿ ಬನ್ನೂರು, ಮುಹಮ್ಮದ್ ಸಿನಾನ್ ಹಸನ್ ನಗರ, ಕಾರ್ಯದರ್ಶಿಗಳಾಗಿ ಇಬ್ರಾಹಿಂ ಖಲೀಲ್ ಬನ್ನೂರು, ಹಮೀದ್ ಸಂಪ್ಯ ಆಯ್ಕೆಗೊಂಡರು.

ಕಾರ್ಯಕಾರಿಣಿ ಸಮಿತಿ ಸದಸ್ಯರುಗಳಾಗಿ ಅಬ್ದುರ್ರಹ್ಮಾನ್ ರವೂಫ್ ಹಸನ್ ನಗರ, ಸಲ್ಮಾನ್ ಫಾರಿಸ್ ಕಬಕ, ಹಬೀಬುಲ್ಲಾಹ್ ಸಫ್ವಾನ್ ಕಬಕ, ಹಮೀದ್ ಕೊಡಿಪ್ಪಾಡಿ, ಝಕರಿಯ ಹಿಮಮಿ ಕೊಡಿಪ್ಪಾಡಿ, ಜಾಬಿರ್ ಬನ್ನೂರು, ಝಹೀರ್ ಬನ್ನೂರು, ಉವೈಸ್ ಬೀಟಿಗೆ, ಮುಹಮ್ಮದ್ ರಾಝಿಕ್ ಸಂಪ್ಯ, ಶಿಹಾಬುರ್ರಹಿಮಾನ್ ಹಸನ್ ನಗರ, ಸಲಾಂ ಹನೀಫಿ ಕಬಕ, ಸಮೀರ್ ಬನ್ನೂರು, ಅಬ್ದುಲ್ ಖಾದರ್ ಸಖಾಫಿ ಹಸನ್ ನಗರ, ಹನೀಫ್ ಬನ್ನೂರು, ಶಫೀಂ ಹಸನ್ ನಗರ, ರಝಾಕ್ ವೀರಮಂಗಿಲ, ಸಿರಾಜ್ ಬೀಟಿಗೆ, ರಶೀದ್ ಮುಕ್ವೆ ರವರನ್ನು ಅಯ್ಕೆ ಮಾಡಲಾಯಿತು. ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಉಪಾಧ್ಯಕ್ಷ ಹಮೀದ್ ಸಖಾಫಿ ರೆಂಜ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. 11 ಮಂದಿಯನ್ನು ಡಿವಿಷನ್ ಕೌನ್ಸಿಲರ್ಸ್‌ಗಳಾಗಿ ನೇಮಕ ಮಾಡಲಾಯಿತು. ಡಿವಿಷನ್ ಸಮಿತಿಯ ಅಧ್ಯಕ್ಷ ಝುಬೈರ್ ಸಖಾಫಿ ಗಟ್ಟಮನೆ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ, ಸೆಕ್ಟರ್ ಉಸ್ತುವಾರಿ ಶಫೀಕ್ ಮಾಸ್ಟರ್ ತಿಂಗಳಾಡಿ, ಹಾರೀಶ್ ಅಡ್ಕ, ರಝಾಕ್ ಸಅದಿ ಕೊಡಿಪ್ಪಾಡಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.