ವಿಟ್ಲ: ಕನ್ಯಾನ ಸಿಂಡಿಕೇಟ್ ಬ್ಯಾಂಕ್ ಮುಂಭಾಗ ವಿಜಯೋತ್ಸವ ಮೆರವಣಿಗೆ ನಡೆಯುತ್ತಿದ್ದ ವೇಳೆ ತನ್ನ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಕರೀಂ ರವರ ಪುತ್ರ ಸಾದಿಕ್ ರವರು ಹಲ್ಲೆಗೊಳಗಾಗಿದ್ದು, ತುಂಬೆ ಆಸ್ಪತ್ರೆಗೆ ದಾಖಲಾಗಿದ್ದು, ನಾನು ಕನ್ಯಾನ ಗ್ರಾಮದ ಕನ್ಯಾನ ಪೇಟೆಯ ಸಿಂಡಿಕೇಟ್ ಬ್ಯಾಂಕ್ ಬಳಿ ರಸ್ತೆಯಲ್ಲಿ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕನ್ಯಾನ ಕಡೆಯಿಂದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಮೆರವಣಿಗೆ ತೆರಳುತ್ತಿದ್ದಾಗ ಮೆರವಣಿಗೆಯಲ್ಲಿದ್ದ ಉಮ್ಮರ್, ಭಾತಿಷಾ, ಆರೀಸ್ ಕುಕ್ಕಾಜೆ, ಮಜೀದ್, ಕೆ.ಪಿ ಅಬ್ದುಲ್ ರಹೀಮಾನ್, ಸಾಬೀತ್ ,ಇಸ್ಮಾಲಿ ಕುಕ್ಕಾಜೆ, ಅಸೀಪ್, ನಾಸೀರ್ ರವರು ದೊಣ್ಣೆಯನ್ನು ಹಿಡಿದುಕೊಂಡು ನನ್ನ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಮೆರವಣಿಗೆ ಮಾಡುತ್ತಿರುವುದು ಕಣ್ಣಿಗೆ ಕಾಣಿಸುತ್ತಿಲ್ಲವೂ ನಿನ್ನ ರಿಕ್ಷಾವನ್ನು ಬದಿಗೆ ನಿಲ್ಲಿಸು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಉಮ್ಮರ್ ಎಂಬಾತ ಆಟೋ ರಿಕ್ಷಾದಿಂದ ಎಳೆದು ಹಾಕಿ ತನ್ನ ಕೈಯಲ್ಲಿ ಇದ್ದ ಮರದ ಕೋಲಿನಿಂದ ಹೊಡೆದಿದ್ದಾರೆ ಎಂದು ಗಾಯಾಳು ಆರೋಪಿಸಿದ್ದಾರೆ. ಈ ಸಂದರ್ಭ ಅಬ್ದುಲ್ ಸತ್ತಾರ್ ಮತ್ತು ಸುಲೈಮಾನ್ ಅವರು ಬರುವುದನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.