ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ಮತ್ತು ಸುಳ್ಯದಲ್ಲಿ ಆಭರಣ ಉದ್ಯಮದಲ್ಲಿ ವಿಶ್ವಾಸಾರ್ಹ ಸೇವೆಯೊಂದಿಗೆ ಜನರ ಪ್ರೀತಿ ಗಳಿಸಿದ ಪ್ರಸಿದ್ಧ ಗೋಲ್ಡ್ ಜ್ಯುವೆಲ್ಲರಿ ಗ್ರೂಪ್ಸ್ ಆದ ದಿನಾರ್ ಗೋಲ್ಡ್ – ಡೈಮಂಡ್ಸ್ ಉಪ್ಪಿನಂಗಡಿಯ ಹಳೆ ಬಸ್ ನಿಲ್ದಾಣ ಬಳಿ ಜ. ೪ರಂದು ಶುಭಾರಂಭ ಗೊಳ್ಳಲಿದೆ. ದಿನಾರ್ ಗೋಲ್ಡ್ ಡೈಮಂಡ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಎ.ಪಿ ಅಬ್ದುಲ್ ಸಮದ್ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ.
ಗೋಲ್ಡ್ ವಿಭಾಗವನ್ನು ಮಾಣಿಲ ಶ್ರೀಧಾಮ ಕ್ಷೇತ್ರದ ಶ್ರೀಗಳಾದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಗಳು ಉದ್ಘಾಟಿಸಲಿದ್ದಾರೆ.ದೀನರ ಕನಾಮಾತೆ ದೇವಾಲಯ ಇದರ ಧರ್ಮ ಗುರುಗಳಾದ ಫಾ.ಅಬೆಲ್ ಲೋಬೊ ಡೈಮಂಡ್ಸ್ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಹಸನ್ ಟವರ್ಸ್ ನ್ನು ಉದ್ಘಾಟಿಸಲಿದ್ದಾರೆ. ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ,ಉಪ್ಪಿನಂಗಡಿ ವರ್ತಕರ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ,ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಮಠ,ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಯು ಟಿ. ತೌಸೀಫ್,ಮಾಲಿಕ್ ದಿನಾರ್ ಮಸೀದಿ ಅಧ್ಯಕ್ಷ ಮುಸ್ತಫಾ ಕೆಂಪಿ,ಶ್ರೀಲಕ್ಷ್ಮೀ ವೆಂಕಟರಮಣ ದೇವಸ್ಥಾನ ಅಧ್ಯಕ್ಷ ಬಿ.ಗಣೇಶ್ ಶೆಣೈ, ಸಹಸ್ರಲಿಂಗೇಶ್ವರ ದೇವಸ್ಥಾನ ಅಧ್ಯಕ್ಷ ಕರುಣಾಕರ ಸುವರ್ಣ, ಗಿರಿಜಾ ಕ್ಲಿನಿಕ್ ನ ಡಾ.ರಾಜಾರಾಂ ಕೆ.ಬಿ.,ವಿಜಯಾ ವೈದ್ಯ ಶಾಲೆಯ ಜಗದೀಶ್ ಶೆಟ್ಟಿ, ಕೆಪಿಸಿಸಿ ಕಾರ್ಮಿಕ ಮಖಂಡ ನಜೀರ್ ಮಠ,ಹಸನ್ ಟವರ್ ಮಾಲಕ ಮಹಮ್ಮದ್ ಇಕ್ಬಾಲ್,ಸಾಮಾಜಿಕ ಧುರೀಣ ಅಝೀಝ್ ಬಸ್ತಿಕಾರ್, ದುರ್ಗಾ ಟೆಕ್ಸ್ ಟೈಲ್ಸ್ ಮಾಲಕ ಮೋಹನ್ ಚೌಧರಿ, ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಳಿಗೆಯಲ್ಲಿ ಮಕ್ಕಳಿಗಾಗಿ ತಯಾರಿಸಿದ ಲಿಟ್ಲ್ ಸ್ಟಾರ್ ಕಲೆಕ್ಷನ್ ಗಳು, ಪ್ರಪಂಚದಲ್ಲೇ ಪ್ರಸಿದ್ಧ ಪಡೆದಿರುವ ನಿಯಾ ಡೈಮಂಡ್ಸ್, ಅಂತರಾಷ್ಟ್ರೀಯ ಗುಣಮಟ್ಟದ ಡಿಸೈನ್ಗಳ ಆಭರಣಗಳು, ಅತ್ಯಾಧುನಿಕ ಶೈಲಿಯಲ್ಲಿ ನೂತನ ಡಿಸೈನರ್ ಗಳು ನಿರ್ಮಿಸಿದ ಆಂಟಿಕ್, ಕೊಲ್ಕತ್ತಾ, ಸಿಂಗಾಪುರ್, ರಾಜ್ ಕೋಟ್,ಬಂಗಾಳಿ ಡಿಸೈನ್, ಇನ್ನಿತರ ಶೈಲಿಯ ಸ್ಪೆಷಲ್ ಆಭರಣಗಳು ಮತ್ತು ಪಾರಂಪರಿಕ ಶೈಲಿಯ ಆಭರಣ, ಮಂಗಳಸೂತ್ರದ ಮಾಂಗಲ್ಯ ಸರಗಳು ಮತ್ತು ಕರಿಮಣಿ ಸರಗಳು ವಿನೂತನ ಮಾದರಿಯಲ್ಲಿ ದೊರೆಯುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ. ಅಲ್ಲದೆ ಚಿನ್ನಾಭರಣಗಳ ಪರಿಶುದ್ಧತೆಯನ್ನು ತಿಳಿಯಲು ಜರ್ಮನ್ ನಿರ್ಮಿತ ಕ್ಯಾರಟ್ ಚೆಕ್ಕಿಂಗ್ ಮೆಶಿನ್ ಮತ್ತು ಫೈಯರ್ ಟೆಸ್ಟಿಂಗ್ ಸೌಲಭ್ಯಗಳು ಸಂಸ್ಥೆಯಲ್ಲಿ ಇದೆ ಎಂದು ಮಾಲಕರು ತಿಳಿಸಿದ್ದಾರೆ.
ದಿನಾರ್ ಗೋಲ್ಡ್ ಉಪ್ಪಿನಂಗಡಿ ಮಳಿಗೆ ಪ್ರಾರಂಭೋತ್ಸದ ಪ್ರಯುಕ್ತ ಆಗಮಿಸಿದ ಗ್ರಾಹಕರಿಗೆ ವಿಶೇಷ ರೀತಿಯ ಬಹುಮಾನ ಗೆಲ್ಲುವ ಯೋಜನೆಯೊಂದಿಗೆ ಪ್ರತೀ ಗಂಟೆಗೆ ಅದೃಷ್ಟ ಕೂಪನ್ ಗೆಲ್ಲುವ ಅವಕಾಶವಿದೆ. ಇದರಲ್ಲಿ ವಿಜೇತರಾದವರಿಗೆ ಫ್ರಿಡ್ಜ್ ,ವಾಶಿಂಗ್ ಮೆಶಿನ್, ಮಿಕ್ಸಿ,ಹಾಗೂ ಇನ್ನಿತರ ಬಹುಮಾನಗಳು ನೀಡಲಾಗುವುದು.