HomePage_Banner
HomePage_Banner
HomePage_Banner
HomePage_Banner

ಇನ್‌ಸ್ಪಾಯರ್ ಅವಾರ್ಡ್-ಮಾನಕ್‌ಗೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 3 ವಿದ್ಯಾರ್ಥಿಗಳು ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1




ಪುತ್ತೂರು: ಡಿಪಾರ್ಟ್‌ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನೋವೇಷನ್ ಫೌಂಡೇಶನ್, ಭಾರತ ಸರಕಾರ ಇದರ ವತಿಯಿಂದ ನಡೆಯುವ ಇನ್‌ಸ್ಪಾಯರ್ ಅವಾರ್ಡ್ ಮಾನಕ್ (INSPIRE AWARD MANAK) 2020ಕ್ಕೆ ಶ್ರೀ ರಾಮಕೃಷ್ಣ ಪ್ರೌಢಶಾಲೆಯ 3 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಹತ್ತನೇ ತರಗತಿಯ ಧನುಷ್ ಬಿ.ಎಸ್. (ಸತೀಶ್ ಬಿ ಮತ್ತು ವಿಶಾಲಾಕ್ಷಿ ಕೆ ಯವರ ಪುತ್ರ) ಸೋಲಾರ್ ಕೊರೋನಾ ಸ್ಯಾನಿಟೈಸರ್, ಒಂಭತ್ತನೇ ತರಗತಿಯ ಅಶ್ವಿತ್ ಕುಮಾರ್ (ಚಿದಾನಂದ ಕೆ ಮತ್ತು ರಜನಿ ಕೆ ಯವರ ಪುತ್ರ) ಫಯರ್ ಫೈಟಿಂಗ್ ರೋಬೋಟ್ ಮತ್ತು ಜನನಿ ಪ್ರಭು ಬಿ (ಮನೋಹರ ಪ್ರಭು ಬಿ ಮತ್ತು ಮಧುಶ್ರೀ ಪ್ರಭು ಬಿ ಯವರ ಪುತ್ರಿ) ಸ್ಮಾರ್ಟ್ ಮಾಸ್ಕ್ ಎಂಬ ಮಾದರಿಗಳು ಆಯ್ಕೆಯಾಗಿರುತ್ತದೆ.

ಈ ವಿದ್ಯಾರ್ಥಿಗಳು ಮಾದರಿ ತಯಾರಿಸಲು ಕೇಂದ್ರ ಸರಕಾರದಿಂದ ತಲಾ ರೂ.10,000/- ಧನಸಹಾಯವನ್ನು ಪಡೆಯಲಿದ್ದಾರೆ ಎಂದು ಶಾಲಾ ಸಂಚಾಲಕರಾದ ಹೇಮನಾಥ ಶೆಟ್ಟಿ ಕಾವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.