HomePage_Banner
HomePage_Banner
HomePage_Banner
HomePage_Banner

ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ ವಿಮೆನ್ ಇಂಡಿಯಾ ಮೂವ್‌ಮೆಂಟ್ ನಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಡುಗೆ ಅನಿಲ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಿಂದ ಜನರಿಗೆ ಸುಳ್ಳು ಭರವಸೆ ನೀಡುವ ಮೂಲಕ ನಮ್ಮ ಹಕ್ಕುಗಳ ಹಗಲು ದರೋಡೆ ಮಾಡುತ್ತಿದೆ ಎಂದು ಆರೋಪಿಸಿ ನ್ಯಾಷನಲ್ ವಿಮೆನ್ ಇಂಡಿಯಾ ಮೂವ್‌ಮೆಂಟ್‌ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿವತಿಯಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿರುವ ಅಮರ್ ಜವಾನ್ ಸ್ಮಾರಕ ಜ್ಯೋತಿಯ ಬಳಿ ಪ್ರತಿಭಟನೆ ನಡೆಯಿತು.

ನ್ಯಾಷನಲ್ ವಿಮೆನ್ ಇಂಡಿಯಾ ಮೂವ್‌ಮೆಂಟ್ ಇದರ ಜಿಲ್ಲಾಧ್ಯಕ್ಷೆ ನಶ್ರೀಯಾ ಬೆಳ್ಳಾರೆ ಅವರು ಮಾತನಾಡಿ ಕೊರೋನಾ ವಿಪತ್ತಿನಿಂದ ಸಂಕಷ್ಟದಲ್ಲಿದ್ದು ಉದ್ಯೋಗ ಕಳೆದು ಕೊಂಡು ನಿರ್ಗತಿಕರಾದ ಸಂದರ್ಭದಲ್ಲಿ ದಿನ ಬಳಕೆ ವಸ್ತುಗಳು ಅಡುಗೆ ಅನಿಲಗಳಿಗೆ ಬೆಲೆ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನರ ಮೇಲೆ ಸರಕಾರ ದೌರ್ಜನ್ಯ ಎಸಗಿದೆ ಎಂದು ಆರೋಪಿಸಿದರು. ನ್ಯಾಷನಲ್ ವಿಮೆನ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಸಮಿತಿ ಸದಸ್ಯೆ ಸಮೀಮ, ನಗರಸಭೆ ಸದಸ್ಯೆ ಪಾತಿಮಾತ್ ಝೋರಾ ಮಾತನಾಡಿದರು. ಕ್ಯಾಂಪಸ್ ಪ್ರಂಟ್‌ನ ಕಾರ್ಯಕರ್ತೆ ಮುಸ್ಕಾನ್ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.