HomePage_Banner
HomePage_Banner
HomePage_Banner
HomePage_Banner

ಫೆಬ್ರವರಿ 7-8: ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಾತ್ರೋತ್ಸವದಲ್ಲಿ ಊರವರ ಪೂರ್ಣರೀತಿಯಲ್ಲಿ ಭಾಗವಹಿಸಿ-ಸೀತಾರಾಮ ರೈ

ಚಿತ್ರ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಫೆಬ್ರವರಿ ೭-೮ ರಂದು ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವ ನಡೆಯಲಿದ್ದು. ಇದರ ಪೂರ್ವಭಾವಿ ಸಭೆಯು ಜ. ೧ ರಂದು ದೇವಾಲಯದ ವಠಾರದಲ್ಲಿ ಜರಗಿತು. ದೇವಾಲಯದ ಜಾತ್ರೋತ್ಸವದ ಉತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈಯವರು ಮಾತನಾಡಿ ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಸರಕಾರದ ನಿಯಮದಂತೆ ನಾವು ಜಾತ್ರೋತ್ಸವವನ್ನು ಹಮ್ಮಿಕೊಳ್ಳಲಾಗುವುದು. ಜಾತ್ರೋತ್ಸವ ವರ್ಷಕ್ಕೆ ಒಮ್ಮೆ ನಡೆಯುವ ಊರಿನ ಹಬ್ಬ, ಇದರಲ್ಲಿ ಶ್ರೀಮಂತ-ಬಡವ ಎಂಬ ಭೇದ ಇಲ್ಲ. ಊರವರು ಪೂರ್ಣ ರೀತಿಯಲ್ಲಿ ಭಾಗವಹಿಸುವ ಮೂಲಕ ನಮ್ಮೂರಿನ ಜಾತ್ರೋತ್ಸವನ್ನು ಯಶಸ್ಸುಗೊಳಿಸೋಣ ಎಂದು ಹೇಳಿದರು.

ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿರವರು ಮಾತನಾಡಿ ದೇವಾಲಯದ ಜಾತ್ರೋತ್ಸವದಲ್ಲಿ ಊರ-ಪರವೂರ ಭಕ್ತಾಧಿಗಳ ಪೂರ್ಣ ಸಹಕಾರ ಅಗತ್ಯ ಎಂದರು.

ಉತ್ಸವ ಸಮಿತಿಯ ಕೋಶಾಧಿಕಾರಿ ರವೀಂದ್ರನಾಥ ರೈ ನೋಲ್ಮೆರವರು ವಿವಿಧ ಸಮಿತಿಗಳ ಬಗ್ಗೆ ಜವಾಬ್ದಾರಿಗಳ ಮಾತನಾಡಿದರು. ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ ಸವಣೂರುರವರು ವಿವಿಧ ಸಲಹೆ-ಸೂಚನೆಯನ್ನು ನೀಡಿದರು.
ಜೋತಿಷ್ಯರಾದ ವಿಶ್ವಮೂರ್ತಿ ಬಡೆಕಿಲ್ಲಾಯ ಸವಣೂರುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಊರ ಪ್ರಮುಖರಾದ ವಿಠಲ ರೈ ನೆಕ್ಕರೆ, ಶ್ರೀಧರ್ ಸುಣ್ಣಾಜೆ, ಗಂಗಾಧರ್ ಸುಣ್ಣಾಜೆ, ಸತೀಶ್ ಬಲ್ಯಾಯ ಕನಡಕುಮೇರು, ಚೇತನ್ ಕುಮಾರ್ ಕೋಡಿಬೈಲು, ಹರೀಶ್ ಗೌಡ ಸುಣ್ಣಾಜೆ, ಜಯರಾಮ ಗುರುಪುತ್ತಾರು ಸವಣೂರು, ಜಯರಾಮ ರೈ ಕನಡಕುಮೇರು ಸವಣೂರು, ಭಾಸ್ಕರ್ ಗೌಡ ಅಡೀಲು, ಜಯಪ್ಪ ಗೌಡ ಸವಣೂರು, ವಿಶ್ವನಾಥ ಗೌಡ ನೆಕ್ಕರೆ, ಶಿವಪ್ಪ ನಾಯ್ಕ್ ಸಹಿತ ಅನೇಕ ಮಂದಿ ಭಾಗವಹಿಸಿದರು. ಸವಣೂರು ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.