
ನಿಡ್ಪಳ್ಳಿ: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯ ಹಾಗೂ ಶ್ರೀ ಪೂಮಾಣಿ ಕಿನ್ನಿಮಾಣಿ ಹಾಗೂ ರಾಜನ್ ದೈವದ ದೈವಸ್ಥಾನದ ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಜ.2 ರಂದು ಗೊನೆ ಮೂಹುರ್ತ ಕಾರ್ಯಕ್ರಮ ನಡೆಸಲಾಯಿತು. ಕಟ್ಟೆನಾರಾಯಣ ರೈ ಕುದ್ಕಾಡಿ ಹಾಗೂ ವಾಸು ಪರವ ಪಡುಮಲೆ ಇವರ ತೋಟದಲ್ಲಿ ಸೇನಾವರಾದ ಉದಯ ಕುಮಾರ್ ಪಡುಮಲೆ ಗೊನೆ ಕಡಿಯುವ ಮೂಲಕ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿರಾಜ ರೈ ಸಜಂಕಾಡಿ, ರತ್ನಾಕರ ರೈ ಕುದ್ಕಾಡಿ, ವಿಷ್ಣು ಭಟ್ ಪಡ್ಪು, ಅಸೀತ್ ರೈ ಪೇರಾಲು, ಉತ್ತಮ್ ಭಟ್, ಸುಬ್ಬಯ್ಯ ರೈ, ತ್ಯಾಂಪಣ್ಣ ಸಿ.ಯಚ್, ದಿನೇಶ್ ಪೇರಾಲು ಹಾಗೂ ಊರಿನವರು ಭಾಗವಹಿಸಿದರು.