HomePage_Banner
HomePage_Banner
HomePage_Banner
HomePage_Banner

ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್: ಗ್ರಾ.ಪಂ.ನಿಂದ ದಂಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಅಧೀನದ ಹೊಸ ಬಸ್‌ನಿಲ್ದಾಣದಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಖಾಸಗಿ ವಾಹನಗಳಿಗೆ ಉಪ್ಪಿನಂಗಡಿ ಗ್ರಾ.ಪಂ. ಶನಿವಾರ ದಂಡ ವಿಧಿಸಿದೆ.

ಇಲ್ಲಿನ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಗಳು ಗ್ರಾ.ಪಂ.ನ ಜಾಗದಲ್ಲಿದ್ದು, ಬಸ್ ನಿಲ್ದಾಣದ ಸುತ್ತಲೂ ಗ್ರಾ.ಪಂ.ನ ವಾಣಿಜ್ಯ ಸಂಕೀರ್ಣಗಳೇ ಇದ್ದು, ಅದರ ನಡುವಿನಲ್ಲಿ ಬಸ್ ನಿಲ್ದಾಣವಿದೆ. ಮೊದಲೇ ಇಕ್ಕಟ್ಟಾಗಿರುವ ಬಸ್‌ನಿಲ್ದಾಣದಲ್ಲಿ ಬೈಕ್, ಕಾರು, ಜೀಪು ಸೇರಿದಂತೆ ಖಾಸಗಿ ವಾಹನಗಳನ್ನು ಕೂಡಾ ಅಡ್ಡಾದಿಡ್ಡಿ ಪಾಕಿಂಂಗ್ ಮಾಡುತ್ತಿದ್ದುದರಿಂದ ಬಸ್‌ಗಳನ್ನು ನಿಲ್ಲಿಸಲು ತೀವ್ರ ಸಮಸ್ಯೆಯಾಗಿತ್ತು. ಕೆಲವು ತಿಂಗಳ ಹಿಂದೆ ಇಲ್ಲಿನ ಸಮಸ್ಯೆಯ ಬಗ್ಗೆ ಮಾಧ್ಯಮಗಳು ಸಚಿತ್ರ ವರದಿ ಮಾಡಿದ ಬಳಿಕ ಗ್ರಾ.ಪಂ. ಎಚ್ಚೆತ್ತುಕೊಂಡು ಖಾಸಗಿ ವಾಹನಗಳನ್ನು ತೆರವುಗೊಳಿಸಿತ್ತು. ಆದರೆ ಗ್ರಾ.ಪಂ.ನ ಕಾರ್ಯಾಚರಣೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿದ್ದರಿಂದ ಮತ್ತದೇ ಸಮಸ್ಯೆ ಇಲ್ಲಿ ಉದ್ಭವವಾಗಿತ್ತು. ಇದೀಗ ಶನಿವಾರ ಮತ್ತೆ ಗ್ರಾ.ಪಂ. ಕಾರ್ಯಾಚರಣೆ ಕೈಗೊಂಡು ಅಡ್ಡಾದಿಡ್ಡಿ ನಿಲ್ಲಿಸಲಾಗಿದ್ದ ಖಾಸಗಿ ವಾಹನಗಳಿಗೆ ಸುಮಾರು ಮೂರು ಸಾವಿರಕ್ಕೂ ಅಧಿಕ ದಂಡ ವಿಧಿಸಿದ್ದಾರೆ. ಉಪ್ಪಿನಂಗಡಿ ಗ್ರಾ.ಪಂ. ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ವಿಲ್ಫ್ರೇಡ್ ಲಾರೆನ್ಸ್ ರೊಡ್ರಿಗಸ್, ಸಿಬ್ಬಂದಿಗಳಾದ ಇಸಾಕ್, ಇಕ್ಬಾಲ್ ಉಪಸ್ಥಿತರಿದ್ದರು.

ಉಪ್ಪಿನಂಗಡಿ ಗ್ರಾ.ಪಂ. ಬಸ್‌ಗಳನ್ನು ನಿಲ್ಲಿಸಲು ಸೂಕ್ತ ಸ್ಥಳಾವಕಾಶವನ್ನು ಮಾಡುವುದಕ್ಕಿಂತ ವಾಣಿಜ್ಯ ಸಂಕೀರ್ಣಗಳನ್ನು ಕಟ್ಟಲು ಇಲ್ಲಿ ಹೆಚ್ಚು ಆದ್ಯತೆ ನೀಡಿದಂತಿದೆ. ಆದರೆ ವಾಣಿಜ್ಯ ಸಂಕೀರ್ಣಗಳಿಗೆ ಸೂಕ್ತ ಪಾರ್ಕಿಂಗ್‌ಗಳನ್ನು ಮಾತ್ರ ಗ್ರಾ.ಪಂ. ಮಾಡಲು ಮುಂದಾಗಿಲ್ಲ. ಇದರಿಂದ ವಾಣಿಜ್ಯ ಸಂಕೀರ್ಣಗಳಿಗೆ ಬರುವವರು ಅನಿವಾರ್ಯವಾಗಿ ಬಸ್ ನಿಲ್ದಾಣದಲ್ಲೇ ವಾಹನಗಳನ್ನು ನಿಲ್ಲಿಸಬೇಕಾಗಿದೆ. ಆದ್ದರಿಂದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣಗಳಿಗೆ ಮೊದಲು ಸೂಕ್ತ ಪಾರ್ಕಿಂಗ್ ಕಲ್ಪಿಸಿ ಆ ಬಳಿಕ ಅಡ್ಡಾದಿಡ್ಡಿ ನಿಲ್ಲಿಸುವ ವಾಹನಗಳಿಗೆ ದಂಡ ವಿಧಿಸಬೇಕಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.