- ಫೆ.06: ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮದೊಂದಿಗೆ ನೇಮೋತ್ಸವ- ನಿರ್ಣಯ
ಪುತ್ತೂರು: ತುಳುನಾಡಿನ ಕಾರಣಿಕತೆಯ ಗರಡಿಗಳಲ್ಲಿ ಒಂದಾಗಿರುವ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ `ಪರ್ಪುಂಜದ ಜಾತ್ರೆ’ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಶ್ರೀ ಬ್ರಹ್ಮಬೈದೇರ್ಕಳ ನೇಮೋತ್ಸವವು ಫೆ.೦೬ ರಂದು ನಡೆಯಲಿದೆ ಎಂದು ಗರಡಿಯ ಆಡಳಿತ ಮೊಕ್ತೇಸರ ಕೂರೇಲು ಸಂಜೀವ ಪೂಜಾರಿಯವರು ತಿಳಿಸಿದರು. ನೇಮೋತ್ಸವದ ಬಗ್ಗೆ ಜ.೦೩ ರಂದು ಗರಡಿ ವಠಾರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು. ಕೋರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಸರಕಾರದ ನೀತಿ ನಿಯಮಾಳಿಗಳನ್ನು ಪಾಲಿಸಿಕೊಂಡು ನೇಮೋತ್ಸವ ಮತ್ತು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದು ಎಂದ ಅವರು ಈ ವರ್ಷವೂ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುವುದು ಈ ಬಗ್ಗೆ ಸರಕಾರದ ಅನುಮತಿಯನ್ನು ಪಡೆದುಕೊಳ್ಳುವುದು ಎಂದು ತಿಳಿಸಿದರು.
ಫೆ.06ರಂದು ನೇಮೋತ್ಸವ
ಈ ವರ್ಷ ಫೆ.೦೬ ರಂದು ನೇಮೋತ್ಸವ ನಡೆಯಲಿದೆ ಎಂದ ಸಂಜೀವ ಪೂಜಾರಿಯವರು ನೇಮೋತ್ಸವದ ವಿವರಗಳನ್ನು ಸಭೆಯ ಮುಂದಿಟ್ಟರು. ಕೋವಿಡ್ ೧೯ ನ ನಿಯಮಗಳನ್ನು ಪಾಲಿಸಿಕೊಂಡು ಕಾರ್ಯಕ್ರಮ ನಡೆಸುವುದು ಇದಕ್ಕೆ ಪ್ರತಿಯೊಬ್ಬ ಭಕ್ತಾಧಿಗಳು ಸಹಕಾರ ನೀಡಬೇಕು ಎಂದರು. ಗ್ರಾಮದ ಸರ್ವರು ಅದೇ ರೀತಿ ಊರಪರವೂರ ಭಕ್ತಾಧಿಗಳು ಸರ್ವ ರೀತಿಯಲ್ಲಿ ಸಹಕಾರ ಕೊಡುವ ಮೂಲಕ ನೇಮೋತ್ಸವನ್ನು ಚಂದಗಾಣಿಸಿಕೊಡುವಂತೆ ಅವರು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಪ್ರೇಮ್ರಾಜ್ ರೈ ಪರ್ಪುಂಜ, ಗೋವಿಂದ ಪೂಜಾರಿ ಕೂರೇಲು, ರಾಜೇಶ್ ರೈ ಪರ್ಪುಂಜ, ಕಿರಣ್ ಮಾಸ್ತರ್ ಪರ್ಪುಂಜ, ನವೀನ್ ಮರಿಕೆ, ರವಿ ಸಂಪ್ಯ, ಜನಾರ್ದನ್ ಅಡ್ಯಾರು, ಪದ್ಮನಾಭ ಕಣಿಯಾರು, ಭಾಸ್ಕರ ಪಲ್ಲತ್ತಾರು ಸೇರಿದಂತೆ ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಹಾಗೂ ಮಲರಾಯ ಸ್ವಸೇವಕ ವೃಂದ ಕೂರೇಲು ಇದರ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು, ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಗರಡಿಯ ಆಡಳಿತ ಮೊಕ್ತೇಸರ ಕೂರೇಲು ಸಂಜೀವ ಪೂಜಾರಿ ಸ್ವಾಗತಿಸಿ, ವಂದಿಸಿದರು.