HomePage_Banner
HomePage_Banner
HomePage_Banner
HomePage_Banner

ಶ್ರೀ ಗೋಪಾಲಕೃಷ್ಣ ಕೆ.ರವರಿಗೆ ಪಿ.ಎಚ್.ಡಿ ಪದವಿ ಪ್ರದಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ  ಗೋಪಾಲಕೃಷ್ಣ P. ರವರಿಗೆ ಕೊಯಂಬತ್ತೂರಿನ ಪ್ರತಿಷ್ಠಿತ ಭಾರತೀಯರ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ. ಡಾ. ಗೋಪಾಲಕೃಷ್ಣ ಕೆ.ರವರು ಬೆಂಗಳೂರಿನ ಆರ್,ಸಿ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಪ್ರೋ. ಪ್ರಮೋದ್ ಗೋಂಚ್ಕಾರ್ ರವರ ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ “Role of Primary Co-Operative Agricultural and Rural Development Banks in Promoting the Socio-Economic Development of Formers: A study with reference to Coastal District of Karnataka”ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.

ಡಾ. ಗೋಪಾಲಕೃಷ್ಣ ಕೆ.ರವರು ತಮ್ಮ ಎಂ.ಕಾಂ ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮತ್ತು ಎಂ.ಎ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಹಾಗೂ ತಮ್ಮ ಎಂ.ಫಿಲ್ ಪದವಿಯನ್ನು ಸೇಲಂನ ವಿನಾಯಕ ಮಿಷನ್ಸ್ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡಿರುತ್ತಾರೆ. ಡಾ| ಗೋಪಾಲಕೃಷ್ಣರವರುಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ಕೊಲ್ಪೆ ದಿ. ಕೆಂಚಪ್ಪ ಗೌಡ ಹಾಗೂ ದಿ. ರಾಮಕ್ಕ ದಂಪತಿಗಳ ಪುತ್ರರಾಗಿದ್ದು, ಪ್ರಸ್ತುತ ಪುತ್ತೂರು ತಾಲೂಕಿನ ಆರ್‍ಯಾಪು ಗ್ರಾಮದ ಸಂಪ್ಯ ಉದಯಗಿರಿಯಲ್ಲಿ ಪತ್ನಿ ಭಾಗ್ಯಜ್ಯೋತಿ ಮತ್ತು ಪುತ್ರಿ ಭುವಿ ಕೆ.ಜಿ ಇವರೊಂದಿಗೆ ವಾಸವಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.