- ಫೆ. 27ರಿಂದ – ಮಾ.1 ಕ್ಷೇತ್ರದಲ್ಲಿ ಜಾತ್ರೋತ್ಸವ
ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಾಲಯದಲ್ಲಿ ಫೆ.27ರಿಂದ ಮಾ.1ರ ವರೆಗೆ ನಡೆಯಲಿರುವ 54 ನೇ ವರ್ಷ ದ ವಾರ್ಷಿಕ ಜಾತ್ರ ಮಹೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಜ.3ರಂದು ಕ್ಷೇತ್ರದಲ್ಲಿ ನಡೆಯಿತು.
ಕ್ಷೇತ್ರ ದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿರವರ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿ ದೇಶಕ್ಕೆ ಬಂದಿರ್ತಕ್ಕಂತಹಾ ಮಹಾಮಾರಿ ಕೊರೋನ ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಜಾತ್ರೋತ್ಸವವನ್ನು ನಡೆಸಲಾಗುತ್ತಿದೆ. ದೇವಾಲಯದ ಅಭಿವೃದ್ಧಿ ಕಾರ್ಯಗಳು ಭರದಿಂದ ಸಾಗುತ್ತಿದ್ದು ಮುಂದಿನ ವರ್ಷ ದೇವರಿಗೆ ವಿಜ್ರಂಭಣೆಯಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದರು.
ಈ ಸಂಧರ್ಭದಲ್ಲಿ ಕ್ಷೇತ್ರ ದ ಮೊಕ್ತೇಸರರಾದ ಎಂ.ಕೆ ಕುಕ್ಕಾಜೆ, ಬಂಡಿಕೋಟ್ಯ ಶ್ರೀ ಕ್ಷೇತ್ರ ನೇಲ್ಯ ಇಲ್ ನ ಧರ್ಮದರ್ಶಿ ಶ್ರೀ ಪ್ರವೀಣ್ ಗುರಿಕಾರರು, ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ| ಶ್ರೀ ಉದಯ ಮಂಗಳೂರು, ಸಂತೋಷ್ ಕುಮಾರ್ ಭಟ್ ಕಜಂಪ್ಪಾಡಿ ಪೆರ್ಲ, ಕಿಶೋರ್ ಕುಮಾರ್ ಪೆರುವೋಡಿ ಬೀಡು, ಶ್ರೀ ವೀರಕೇಸರಿ ಬಳಗ ಪೆರುವೋಡಿ ಇದರ ಅಧ್ಯಕ್ಷರಾದ ಪ್ರವೀಣ್ ರೈ, ಸೂರ್ಯ ಪೆರುವೋಡಿ, ಶಿವ ಕುಲಾಲ್, ಯತೀಶ್ ಕೆ, ಪದ್ಮನಾಭ ಪೆರ್ಲ,ದೇವಾಲಯದ ಸೇವಾ ಸಮಿತಿ ಅಧ್ಯಕ್ಷರಾದ ರವಿ ಕುಟ್ಯಮಡ್ಕ ಮೊದಲಾದವರು ಉಪಸ್ಥಿತರಿದ್ದರು. ದೇವಿ ಪ್ರಸಾದ್ ಸ್ವಾಗತಿಸಿ, ರವಿ ಎಸ್. ಎಂ. ವಂದಿಸಿದರು.