HomePage_Banner
HomePage_Banner
HomePage_Banner
HomePage_Banner

ಪಾನೀಯ ಕುಡಿಯಲು ಬಂದ ಅಪ್ರಾಪ್ತ ಬಾಲಕಿಯ ಫೊಟೋ ತೆಗೆದು ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿದ ಬೇಕರಿ ಮಾಲಕ : ವಿಚಾರಿಸಲು ಬಾಲಕಿಯ ಜತೆ ಅಂಗಡಿಗೆ ತೆರಳಿದ ಹಿಂದೂ ಸಂಘಟನೆಯ ಕಾರ್ಯಕರ್ತರು-ಮಾತಿನ ಚಕಮಕಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು, ಕಡಬ ಉದ್ವಿಗ್ನ


ಕಡಬ: ಇಲ್ಲಿನ ಪೇಟೆಯಲ್ಲಿರುವ ಡಿಲೈಟ್ ಬೇಕರಿಗೆ ಪಾನೀಯ ಕುಡಿಯಲು ಬಂದ ಅಪ್ರಾಪ್ತ ಶಾಲಾ ಬಾಲಕಿಯೋರ್ವಳ ಫೋಟೋ ತೆಗೆದು ಅದನ್ನು ತನ್ನ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕಿಕೊಂಡ ಅಂಗಡಿ ಮಾಲಕನನ್ನು ವಿಚಾರಿಸಲು ಬಾಲಕಿಯ ಜತೆ ಹಿಂದೂ ಸಂಘಟನೆಯ ಕಾರ್ಯಕರ್ತರು ತೆರಳಿದ ಸಂದರ್ಭ ಮಾತಿನ ಚಕಮಕಿ ನಡೆದಿದ್ದು ಬಳಿಕ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಪರಿಣಾಮ ತುಸು ಉದ್ವಿಘ್ನ ಸ್ಥಿತಿ ನಿರ್ಮಾಣವಾದ ಘಟನೆ ಜ.2ರಂದು ಸಂಜೆ ವೇಳೆ ನಡೆದಿದೆ. ಈ ಸಂಬಂಧ ಅಂಗಡಿ ಮಾಲಕನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕಡಬ ಬಸ್ ನಿಲ್ದಾಣದ ಬಳಿ ಇತ್ತೀಚೆಗೆ ಪ್ರಾರಂಭಗೊಂಡಿರುವ ಡಿಲೈಟ್ ಬೇಕರಿಯ ಮಾಲಕ ಯಾಕೂಬ್ ಎಂಬವರು ಜ.೧ರಂದು ತನ್ನ ಅಂಗಡಿಗೆ ಜ್ಯೂಸ್ ಕುಡಿಯಲು ಬಂದ ಅಪ್ರಾಪ್ತ ಶಾಲಾ ಬಾಲಕಿಯ ಫೊಟೋ ತೆಗೆದು ಅದನ್ನು ತನ್ನ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು, ಈ ವಿಚಾರ ಜ.೨ರಂದು ಹಿಂದೂ ಸಂಘಟನೆಯವರಿಗೆ ತಿಳಿಯಿತು. ಕೂಡಲೇ, ಫೊಟೋದಲ್ಲಿರುವ ಬಾಲಕಿಯ ಮನೆಯವರನ್ನು ಸಂಪರ್ಕಿಸಿದಾಗ ಅ ಬಾಲಕಿಗೆ ಫೊಟೋ ತೆಗೆದ ವಿಷಯವೇ ಗೊತ್ತಿರಲಿಲ್ಲ, ಆ ವೇಳೆ ಬಾಲಕಿ ಹಾಗೂ ಅವರ ಮನೆಯವರು ಕಡಬಕ್ಕೆ ಅಗಮಿಸಿದರು, ಇದೇ ವೇಳೆ ಅಲ್ಲಿ ಜಮಾಯಿಸಿದ್ದ ಯುವಕರು ಅಂಗಡಿಗೆ ತೆರಳಿದ್ದರು, ಆದರೆ ಅಂಗಡಿ ಮಾಲಕ ಅಲ್ಲಿರಲಿಲ್ಲ. ಬಳಿಕ ಠಾಣೆಗೆ ಆಗಮಿಸಿದ ಯಾಕೂಬ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದರು.

ಕಡಬದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣ: ಇದೇ ವೇಳೆ ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಗಡಿ ಮಾಲಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆಗಾಗಲೇ ಅಲ್ಲಿಗೆ ಆಗಮಿಸಿದ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿಯವರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು. ಆದರೂ ಕಾರ್ಯಕರ್ತರ ಆವೇಶ ಮಾತ್ರ ತಣ್ಣಗಾಗಿರಲಿಲ್ಲ. ಕೃಷ್ಣ ಶೆಟ್ಟಿ, ಪ್ರಕಾಶ್ ಎನ್.ಕೆ, ಮೋಹನ ಕೆರೆಕೋಡಿ ಮೊದಲಾದವರು ಕಾರ್ಯಕರ್ತರನ್ನು ಮನೆಗೆ ತೆರಳುವಂತೆ ಮನವೊಲಿಸುತ್ತಿದ್ದ ಸಂದರ್ಭ ಕಡಬ ಠಾಣೆಯ ಎ.ಎಸ್.ಐ ಚಂದ್ರಶೇಖರ್ ಅವರು ಹಿಂದೂ ಯುವಕನಿಗೆ ಲಾಠಿ ಬೀಸಿದ್ದರು, ಈ ಸಂದರ್ಭದಲ್ಲಿ ಮತ್ತೆ ಜಮಾಯಿಸಿದ ಕಾರ್ಯಕರ್ತರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ರಸ್ತೆಯ ಮಧ್ಯೆ ಹಾಗೂ ಠಾಣೆಯ ಮುಂಭಾಗ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು, ಬಳಿಕ ಎ.ಎಸ್.ಐ.ರವರು ತಪ್ಪನ್ನು ಒಪ್ಪಿಕೊಂಡರು. ಬಳಿಕ ಹಿಂದೂ ಸಂಘಟನೆಯ ಕಾರ್ಯಕರ್ತರು ತೆರಳಿದರು.

ಹಿಂದೂಗಳ ಭಾವನೆಗೆ ಧಕ್ಕೆ ತಂದರೆ ಸುಮ್ಮನಿರುವುದಿಲ್ಲ-ಕೃಷ್ಣ ಶೆಟ್ಟಿ ಎಚ್ಚರಿಕೆ
ಜ್ಯೂಸ್ ಸೆಂಟರ್‌ನಲ್ಲಿ ಅನ್ಯಕೋಮಿನ ಯುವಕ ಅಪ್ರಾಪ್ತ ಬಾಲಕಿಯ ಪೊಟೊ ತೆಗೆದ ಘಟನೆಗೆ ಸಂಬಂಧಿಸಿ ಹಿಂದೂ ಕಾರ್ಯಕರ್ತರು ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಸೇರಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಮಾತನಾಡಿ, ಮೊಬೈಲ್‌ನಲ್ಲಿ ಯುವತಿಯ ಫೊಟೊ ಹಾಕಿ ಮಾನಸಿಕ ಕಿರುಕುಳ ನೀಡಿದ್ದು ಈ ಘಟನೆಯನ್ನು ಹಿಂದೂ ಸಂಘಟನೆ ಖಂಡಿಸುತ್ತದೆ. ಇಂತಹ ಘಟನೆ ಆಗಾಗ ಪುನರಾವರ್ತನೆ ಆಗುತ್ತಿದ್ದು ಹಿಂದೂ ಸಮಾಜದ ಭಾವನೆಗೆ ಧಕ್ಕೆಯಾದರೆ ಖಂಡಿತ ಸುಮ್ಮನಿರುವುದಿಲ್ಲ.
ಇದೇ ರೀತಿ ಮುಂದುವರೆದಲ್ಲಿ ಪೊಲೀಸ್ ಇಲಾಖೆಗೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕಷ್ಟವಿದೆ. ಈ ಘಟನೆಯಲ್ಲಿ ಹಿಂದೂ ಸಮಾಜದ ಒಗ್ಗಟ್ಟನ್ನು ತೋರಿಸಿಕೊಟ್ಟಿದೆ ಎಂದರು.
ಇಂತಹ ಘಟನೆಗಳು ಕಡಬದಲ್ಲಿ ನಿರಂತರ ನಡೆಯುತ್ತಿದೆ-ಪ್ರಮೋದ್ ರೈ
ಅನ್ಯಧರ್ಮದ ವ್ಯಕ್ತಿಗಳಿಂದ ಹಿಂದು ಯುವತಿಯರ ಬಗ್ಗೆ ಅಶ್ಲೀಲವಾಗಿ ವರ್ತಿಸುವ ಘಟನೆಗಳು ಕಡಬದಲಲಿ ನಿರಂತರ ನಡೆಯುತ್ತಿದೆ. ಎಲ್ಲವನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ, ಪೋಲಿಸರು ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿ.ಹಿಂ.ಪ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.