HomePage_Banner
HomePage_Banner
HomePage_Banner
HomePage_Banner

ಫಸ್ಟ್ ಫಿನ್ ಗೋಲ್ಡ್ ಪ್ರೈ ಲಿ. ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇಲ್ಲಿನ ಬೊಳುವಾರ್ ಮುಖ್ಯ ರಸ್ತೆಯಲ್ಲಿರುವ ಸೂರ್ಯಪ್ರಭ ಕಟ್ಟಡದಲ್ಲಿ ಫಸ್ಟ್ ಫಿನ್ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಶುಭಾರಂಭಗೊಂಡಿದೆ. ಫಸ್ಟ್ ಫಿನ್ ಗ್ರೂಪ್ ನ ನಿರ್ದೇಶಕರಾಗಿರುವ ಶ್ರೀಮತಿ ಜಯಶ್ರೀ ಸತ್ಯನಾರಾಯಣ ಅವರು ನೂತನ ಕಛೇರಿಯನ್ನು ಉದ್ಘಾಟಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನ ಮಾಜಿ ಅಧ್ಯಕ್ಷ, ಪ್ರಜಾವಾಣಿ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ ಇ.ವಿ. ಸತ್ಯನಾರಾಯಣ ಅವರ ಮಗ, ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಕುಲದೀಪ್ ಇ.ಎಸ್. ಅವರು ಮಾತನಾಡಿ, ‘ನಂಬಿಕೆಯ ತಳಹದಿಯ ಮೇಲೆ ಯಶಸ್ಸಿನ ಗೋಪುರವನ್ನು ಕಟ್ಟುವ ಕಾರ್ಯದಲ್ಲಿ ನಮ್ಮ ಸಂಸ್ಥೆ ಮುಂದಡಿಯಿಡುತ್ತಿದೆ ಎಂದು ಹೇಳಿದರು.  ಕಳೆದ ವರ್ಷ ನಮಗೆಲ್ಲಾ ಹಿನ್ನಡೆಯ ವರ್ಷವಾಗಿತ್ತು ಈ ಸಂದರ್ಭದಲ್ಲೇ ಪ್ರಾರಂಭವಾದ ನಮ್ಮ ಈ ಸಂಸ್ಥೆ ಈ ಏಳೆಂಟು ತಿಂಗಳ ಅವಧಿಯಲ್ಲಿ ಸಾಕಷ್ಟು ಪ್ರಗತಿಯನ್ನು ದಾಖಲಿಸಿದೆ. ಇದೀಗ ಪುತ್ತೂರಿನಲ್ಲೂ ಫಸ್ಟ್‌ಫಿನ್ ಗೋಲ್ಡ್ ಸಂಸ್ಥೆಯು ತನ್ನ ಶಾಖೆಯನ್ನು ಪ್ರಾರಂಭಿಸುವ ಮೂಲಕ ಪ್ರಗತಿಯ ಹಾದಿಯಲ್ಲಿ ದಾಪುಗಾಲಿಡುತ್ತಿದೆ ಎಂದು ಹೇಳಿದರು. ಸಂಸ್ಥೆಯ ಪ್ರಗತಿಂಗಾಗಿ ಹಗಲಿರುಳು ದುಡಿಯುತ್ತಿರುವ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳ ಸೇವಾ ತತ್ಪರತೆಯನ್ನು ಕುಲದೀಪ್ ಅವರು ಈ ಸಂದರ್ಭದಲ್ಲಿ ವಿಶೇಷವಾಗಿ ಸ್ಮರಿಸಿಕೊಂಡರು.

ಕಟ್ಟಡದ ಮಾಲಕ ವಸಂತ್ ಕಾಮತ್, ವಕೀಲ ಗೋಪಾಲಕೃಷ್ಣ ಭಟ್, ವಲಯ ಮುಖ್ಯಸ್ಥ ಶಿವಣ್ಣ, ವಿಜಯೇಂದ್ರ ಹಾಗೂ ಶಿವ ನಾಯಕ್, ಕೋ-ಅಪರೇಟಿವ್ ಮ್ಯಾನೇಜರ್ ಜನಾರ್ದನ್, ಡಿವಿಷನಲ್ ಮ್ಯಾನೇಜರ್ ಶಿವಕುಮಾರ್ ಸ್ವಾಮಿ ಹಾಗೂ ಚೇತನ್ ಸೇರಿದಂತೆ ಹಲವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.