HomePage_Banner
HomePage_Banner
HomePage_Banner
HomePage_Banner

ಜ.4 ರಿಂದ 6 ರವರೆಗೆ ಆರ್ಲಪದವಿನಲ್ಲಿ ಆಧಾರ್ ಮೇಳ ಮತ್ತು ಹೆಲ್ತ್ ಕಾರ್ಡ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಭಾರತೀಯ ಅಂಚೆ ಇಲಾಖೆ, ಪುತ್ತೂರು, ಗಡಿನಾಡ ಶ್ರೆಯೋಭಿವೃದ್ದಿ ಟ್ರಸ್ಟ್, ಆರ್ಲಪದವು ಕಮ್ಯುನಿಕೇಷನ್ ಸೆಂಟರ್ ಇದರ ಸಹಯೋಗದೊಂದಿಗೆ ಇಂದಿನಿಂದ  ಮೂರು ದಿನಗಳ ಕಾಲ ಆಧಾರ್ ಮೇಳ ಮತ್ತು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ( ಹೆಲ್ತ್ ಕಾರ್ಡ್) ಮೇಳ ಆರ್ಲಪದವಿನಲ್ಲಿ ನಡೆಯಲಿದೆ.
 ಡಿಜಿಟಲ್‌ ಸೇವಾ ಕೇಂದ್ರ ಆರ್ಲಪದವು ( ರಾಧಾ ಮೆಡಿಕಲ್ ಎದುರು) ಇಲ್ಲಿ ಜ.4 ರಿಂದ 6 ರವರೆಗೆ ನಡೆಯಲಿರುವ ಮೇಳದಲ್ಲಿ ಅಂಚೆ ಇಲಾಖೆಯಿಂದ ಸಿಗುವ ಸೇವೆಗಳಾದ ಅಂಚೆ ಉಳಿತಾಯ ಖಾತೆ, ಸುಕನ್ಯಾ ಸಮೃದ್ದಿ ಯೋಜನೆ, ಜೀವ ವಿಮೆ, ಇಂಡಿಯಾ ಪೋಸ್ಟ್ ಪೇಮೆಂಟ್ಸ್, ಪ್ರಧಾನ ಮಂತ್ರಿ ಜೀವನ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ ಮುಂತಾದ ಸೇವೆಗಳ ಸ್ಥಳದಲ್ಲೇ ಖಾತೆ ತೆರೆಯುವ ಸೌಲಭ್ಯ ಇದ್ದು ಸಾರ್ವಜನಿಕರು ಈ ಎಲ್ಲಾ ಯೋಜನೆಗಳ ಸೌಲಭ್ಯ ಪಡೆದು ಕೊಳ್ಳುವಂತೆ ಗಡಿನಾಡ ಶ್ರೆಯೋಭಿವೃದ್ದಿ ಟ್ರಸ್ಟ್ ಪ್ರವರ್ತಕ ಹಾಜಿ.ಎಸ್ ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.