ಕಾಣಿಯೂರು: ಶ್ರೀ ಹರಿ ಭಜನಾ ಮಂಡಳಿ ಪುಣ್ಚತ್ತಾರು ಇದರ ಆಶ್ರಯದಲ್ಲಿ ೬೫ನೇ ವರ್ಷದ ಭಜನಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಜ ೫ರಂದು ನಡೆಯಿತು. ಬೆಳಿಗ್ಗೆ ಗಣಹೋಮ ಮತ್ತು ನಾಗಾರಾಧನೆ, ಶ್ರೀ ಸತ್ಯನಾರಾಯಣ ಪೂಜೆ, ಮದ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಸಂಜೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ನಾವೂರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ಕಾಣಿಯೂರು, ಶ್ರೀರಾಮಾಂಜನೇಯ ಭಜನಾ ಮಂಡಳಿ ಮುರುಳ್ಯ ಎಣ್ಮೂರು, ಶ್ರೀ ಮಹಿಷಾಮರ್ಧಿನಿ ಭಜನಾ ಮಂಡಳಿ ಕೇರ್ಪಡ, ಶ್ರೀ ಸೀತಾರಾಂಜನೇಯ ಭಜನಾ ಮಂಡಳಿ ಎಣ್ಮೂರು, ಶ್ರೀ ಕಪಿಲೇಶ್ವರ ಭಜನಾ ಮಂಡಳಿ ಚಾರ್ವಾಕ ಹಾಗೂ ಊರವರಿಂದ ವಿಶೇಷ ಭಜನಾ ಕಾರ್ಯಕ್ರಮ ಹಾಗೂ ಕುಣಿತ ಭಜನಾ ಕಾರ್ಯಕ್ರಮ ನಡೆದು, ಬಳಿಕ ಮಹಾಮಂಗಳಾರತಿ ನಡೆಯಿತು. ಈ ಸಂದರ್ಭದಲ್ಲಿ ಪುಣ್ಚತ್ತಾರು ಶ್ರೀ ಹರಿ ಭಜನಾ ಮಂಡಳಿಯ ಗೌರವಾಧ್ಯಕ್ಷ ನಾರಾಯಣ ಗೌಡ ಪುಣ್ಚತ್ತಾರು, ಅಧ್ಯಕ್ಷ ಸುಂದರ ನಾಯ್ಕ ಉಪ್ಪಡ್ಕ, ಕಾರ್ಯದರ್ಶಿ ಗಿರೀಶ್ ಬೇಂಗಡ್ಕ, ಜತೆ ಕಾರ್ಯದರ್ಶಿ ಕುಲಕೀರ್ತಿ ಉಪ್ಪಡ್ಕ, ಅರ್ಚಕ ಕರುಣಾಕರ ಬೀರುಕುಡಿಕೆ, ಕೋಶಾಧಿಕಾರಿ ಅಮರನಾಥ ಮಾಳ ಸೇರಿದಂತೆ ಭಜನಾ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.