ಪುತ್ತೂರು: ವಿಟ್ಲ ವಲಯದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ತಂಡದ ಸುಮಾರು 50 ಮಂದಿ ಫಲಾನುಭವಿಗಳು ಕಡಮಜಲು ಕೃಷಿ ಕ್ಷೇತ್ರಕ್ಕೆ ಜ. 1 ರಂದು ಭೇಟಿ ನೀಡಿ ಕೃಷಿ ದರ್ಶನ ಮಾಡಿದರು. ಸಮಗ್ರ ಕೃಷಿ ಅಧ್ಯಯನ ಕಾರ್ಯಾಗಾರ ದಿಲ್ಲಿ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಚಿನ್ನದ ಪದಕ ವಿಜೇತ ಕೃಷಿಕ ಕಡಮಜಲು ಸುಭಾಸ್.ರೈ ಯವರು ವಿವಿಧ ತೋಟಗಾರಿಕಾ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪುತ್ತೂರು ತಾಲೂಕು ಧ.ಗ್ರಾ.ಯೋಜನೆಯ ಕೃಷಿ ಅಧಿಕಾರಿ ಉಮೇಶ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆದಂಬಾಡಿ ಗ್ರಾಮ ಪಂಚಾಯತ್ ಸದಸ್ಯ ಮಿತ್ರಂಪಾಡಿ ಭಾಸ್ಕರ್ ರೈ ಯವರು ಶುಭ ಹಾರೈಸಿದರು. ವಿಟ್ಲ ವಲಯದ ಕೃಷಿ ಮೇಲ್ವಿಚಾರಕಿ ನಂದಿತಾ ರವರು ಸ್ವಾಗತಿಸಿ ವಂದಿಸಿದರು. ಪ್ರೀತಿ ಯಸ್. ರೈ ಯವರು ಉಪಚರಿಸಿದರು.