HomePage_Banner
HomePage_Banner
HomePage_Banner
HomePage_Banner

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಲಕ್ಷ್ಮಣ ನಾಯ್ಕ, ಪ್ರ.ಕಾರ್ಯದರ್ಶಿಯಾಗಿ ವೇದಾವತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪುತ್ತೂರು ತಾಲೂಕು ಘಟಕದ ಮೊದಲ ಅವಧಿಗೆ ನೂತನ ಅಧ್ಯಕ್ಷರಾಗಿ ಪೆರ್ಲಂಪಾಡಿ ಹಿ.ಪ್ರಾ ಶಾಲಾ ಮುಖ್ಯಗುರು ಲಕ್ಷ್ಮಣ ನಾಯ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮುಕ್ವೆ ಹಿ.ಪ್ರಾ ಶಾಲಾ ಶಿಕ್ಷಕಿ ವೇದಾವತಿಯವರು ಆಯ್ಕೆಯಾಗಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿಯ ಗುರು ಭವನದಲ್ಲಿ ಜ.2ರಂದು ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ನಡೆಸಲಾಯತು. ಉಪಾಧ್ಯಕ್ಷರಾಗಿ ಸರ್ವೆ ಶಾಲಾ ಶಿಕ್ಷಕ ನವೀನ್ ಕುಮಾರ್ ರೈ ಕಬಕ ಶಾಲಾ ಶಿಕ್ಷಕಿ ಲತಾಕುಮಾರಿ, ಜತೆ ಕಾರ್ಯದರ್ಶಿಯಾಗಿ ಸೂರಂಬೈಲು ಶಾಲಾ ಶಿಕ್ಷಕ ನಾಗೇಶ್ ಪಾಟಾಳಿ ಖಜಾಂಚಿಯಾಗಿ ಪೆರ್ನಾಜೆ ಶಾಲಾ ಶಿಕ್ಷಕಿ ಶಾಂತಿ ಮೊರಸ್, ಹಾಗೂ ಹಾರಾಡಿ ಶಾಲಾ ಶಿಕ್ಷಕಿ ಗಂಗಾವತಿಯವರನ್ನು ಜಿಲ್ಲಾ ಪ್ರತಿನಿಧಿಯಾಗಿ ಆರಿಸಲಾಯಿತು. ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಕೈಕಾರ ಶಾಲಾ ಶಿಕ್ಷಕ ರಾಮಣ್ಣ ರೈ ಎಸ್., ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಮುರ ಶಾಲಾ ಶಿಕ್ಷಕ ಸುಧಾಕರ ರೈ ಮುರ ಶಾಲೆ ಆಯ್ಕೆ ಮಾಡಲಾಯಿತು.

ಅಲ್ಲದೆ ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸರ್ವೆ ಹಿ.ಪ್ರಾ ಶಾಲಾ ನವೀನ್ ಕುಮಾರ್ ರೈ, ಕಾರ್ಯದರ್ಶಿಯಾಗಿ ಮುರ ಶಾಲಾ ಸುಧಾಕರ ರೈಯವರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯ ಸ್ಟ್ಯಾನಿ ಪ್ರವೀಣ್ ಮಸ್ಕರೇನಸ್, ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯೆ ತನುಜಾ ಉಪಸ್ಥಿತರಿದ್ದರು. ನಾಗೇಶ್ ಪಾಟಾಳಿ ಸ್ವಾಗತಿಸಿ, ರಾಮಣ್ಣ ರೈ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.