ಪುತ್ತೂರು : ಹೊಸ ವರ್ಷದ ಮೊದಲ ದಿನದಂದು ಆನಡ್ಕ ಹಿ.ಪ್ರಾ.ಶಾಲೆಯಲ್ಲಿ ಪೂರ್ಣ ಹಾಜರಾತಿಯೊಂದಿಗೆ ವಿದ್ಯಾರ್ಥಿಗಳು ಸಂತಸದಿಂದ ಆಗಮಿಸಿದ್ದರು. ಶಾಲೆಯನ್ನು ಸ್ವಚ್ಚಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಕೋವಿಡ್ ನಿಯಮದಂತೆ ವಿದ್ಯಾರ್ಥಿಗಳನ್ನು ಹೂ ನೀಡಿ ಸ್ವಾಗತಿಸಲಾಯಿತು. ಶಾರದಾ ಪೂಜೆ ನಡೆಸಲಾಯಿತು. ಮುಖ್ಯಗುರು ಶುಭಲತಾ, ಸಹಶಿಕ್ಷಕರಾದ ಫೆಲ್ಸಿಟಾ ಡಿ.ಕುನ್ಹಾ, ಮಾಲತಿ, ಅಕ್ಷತಾ ಹಾಗೂ ಗೌರವ ಶಿಕ್ಷಕಿ ಸೌಮ್ಯ ಉಪಸ್ಥಿತರಿದ್ದರು.