ಪುತ್ತೂರು: ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ 12 ನೇ ಪ್ರತಿಷ್ಠಾ ವಾರ್ಷಿಕೋತ್ಸವ ಜ.4 ಮತ್ತು 5 ರಂದು ಶ್ರೀ ವಿಷ್ಣು ಸೇವಾ ಸಮಿತಿ, ಕುರಿಯ ಇದರ ಸಹಕಾರದೊಂದಿಗೆ ಜರಗಲಿದೆ. ಜ. ೪ ರಂದು ಸಂಜೆ ೫.೩೦ ರಿಂದ ರಾತ್ರಿ ೧೧ ರತನಕ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಮಂಗಳೂರು ಇದರ ಪುತ್ತೂರು ಘಟಕದ ಚತುರ್ಥ ವಾರ್ಷಿಕ ಸಮಾರಂಭ ಮತ್ತು ಯಕ್ಷಗಾನ ಸೇವಾ ಬಯಲಾಟ ಜರಗಲಿದೆ. ರಾತ್ರಿ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉದಯಗಿರಿ ಮುಂಡೂರುರವರಿಂದ ಭಜನೆ ಕಾರ್ಯಕ್ರಮ. ಬಳಿಕ ಸಾರ್ವಜನಿಕ ರಂಗಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ಜ.೫ ರಂದು ಬೆಳಿಗ್ಗೆ ೬ರಿಂದ ಸಂಜೆ ೬ರ ತನಕ ಆಹ್ವಾನಿತ ಭಜನಾ ತಂಡಗಳಿಂದ ಅರ್ಧ ಏಕಾಹ ಭಜನೆ, ಬೆಳಿಗ್ಗೆ ೮ರಿಂದ ದೇವತಾ ಪ್ರಾರ್ಥನೆ, ಮಹಾಗಣಪತಿಹೋಮ, ಆಶ್ಲೇಷ ಬಲಿ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ ೭ಕ್ಕೆ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ ನಡೆಯ ಲಿದೆ. ರಾತ್ರಿ ೮.೩೦ರಿಂದ ಶ್ರೀ ದೇವರ ಬಲಿ ಉತ್ಸವ, ವಸಂತ ಕಟ್ಟೆ ಪೂಜೆ, ಬೆಡಿ ಪ್ರದರ್ಶನ , ದರ್ಶನ ಬಲಿ ಉತ್ಸವ, ಬಟ್ಟಲುಕಾಣಿಕೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ ೧೦.೩೦ರಿಂದ ದೈವಗಳ ನೇಮೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹರೀಶ್ ಪಿ ಹಾಗೂ ಪ್ರಭಾರ ಅಧ್ಯಕ್ಷ ಸತೀಶ್ ರೈ ಡಿಂಬ್ರಿಗುತ್ತುರವರು ತಿಳಿಸಿದ್ದಾರೆ.