- ಸಂಗೀತಾಭಿಮಾನಿಗಳಿಗೆ ಸಂತಸದ ಸಂಗತಿಯಾಗಿದೆ: ಸುಂದರ್ ರೈ ಮಂದಾರ
ಪುತ್ತೂರು: ಗಾನಸಿರಿ ಕಿರಣ್ ಕುಮಾರ್ರವರ ಗಾನಸಿರಿ ಕಲಾಕೇಂದ್ರದ ಶಾಖೆ ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಶುಭಾರಂಭಗೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ಸಂಗೀತ ಕಲಿಯಲು ಆಸಕ್ತಿ ಇರುವ ಸಂಗೀತಾಭಿಮಾನಿಗಳಿಗೆ ಇದೊಂದು ಸುವರ್ಣಾವಕಾಶ.ಈಗಾಗಲೇ ರಾಜ್ಯದೆಲ್ಲೆಡೆ ಹೆಸರು ಮಾಡಿರುವ ಗಾನಸಿರಿಯ ನುರಿತ ಸಂಗೀತ ಶಿಕ್ಷಕರು ಇಲ್ಲಿ ಸಂಗೀತ ಕಲಿಸಲಿದ್ದಾರೆ ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ನಟ, ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು. ಅವರು ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಗಾನಸಿರಿಯ ಕುಂಬ್ರ ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಕುಂಬ್ರ ಶ್ರೀ ಭಗವತೀ ವಾಯು ಮಾಲಿನ್ಯ ತಪಾಸಣಾ ಕೇಂದ್ರದ ಮಾಲಕ ನಾರಾಯಣ ಕುಕ್ಕುಪುಣಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತ ಪೊಲೀಸ್ ಕಾನ್ಸ್ಸ್ಟೇಬಲ್ ಉದಯ ರೈ ಮಂದಾರ, ಮಕ್ಕಳ ಪೋಷಕರಾದ ನಾರಾಯಣ ಗೌಡ, ರೇವತಿ, ಸಂಗೀತ ಶಿಕ್ಷಕಿ ಶ್ರೀಲಕ್ಷ್ಮೀ, ಡ್ರಾಯಿಂಗ್ ಶಿಕ್ಷಕಿ ದಿವ್ಯಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು. ಗಾನಸಿರಿಯ ಕಿರಣ್ ಕುಮಾರ್ ಸ್ವಾಗತಿಸಿ, ವಂದಿಸಿದರು.
ಇಲ್ಲಿ ಸುಗಮ ಸಂಗೀತ,ಮಧುರ ಚಲನಚಿತ್ರ ಗೀತೆ, ಭಾರತೀಯ ಶೈಲಿಯ ಕೀಬೋರ್ಡ್ ತರಗತಿಗಳು ಮತ್ತು ಡ್ರಾಯಿಂಗ್ ತರಗತಿಗಳು ನಡೆಯಲಿದೆ. ಸಂಗೀತ ಕಲಿಯಲು ಆಸಕ್ತಿ ಇರುವ ೩.೫ ವರ್ಷದಿಂದ ಹಿಡಿದು ವಯೋವೃದ್ಧರಿಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9901555893 ಗೆ ಸಂಪರ್ಕಿಸಬಹುದಾಗಿದೆ.
ಕುಂಬ್ರದ ಮಂದಾರ ಸಂಕೀರ್ಣದಲ್ಲಿ ಗಾನಸಿರಿಯ ಶಾಖೆಯನ್ನು ಆರಂಭಿಸಿದ್ದೇವೆ. ಸಂಗೀತ ಕಲಿಯಲು ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಅವಕಾಶವಿದೆ. ನುರಿತ ಸಂಗೀತ ಶಿಕ್ಷಕರಿಂದ ಸಂಗೀತ ಕಲಿಸಲಾಗುತ್ತದೆ. ಸಂಗೀತದೊಂದಿಗೆ ಡ್ರಾಯಿಂಗ್ ತರಗತಿಗಳು ನಡೆಯಲಿದೆ. ಎಲ್ಲರ ಪ್ರೋತ್ಸಾಹ ಸಹಕಾರ ಬೇಕಾಗಿದೆ. –ಕಿರಣ್ ಕುಮಾರ್ ಗಾನಸಿರಿ, ಸಂಗೀತ ಶಿಕ್ಷಕರು