ಕಡಬ:ಜ್ಯೂಸ್ ಕುಡಿಯಲು ಬಂದ ಹುಡುಗಿಯ ಫೋಟೋ ತೆಗೆದು ವಾಟ್ಸ್ಅಪ್ ಸ್ಟೇಟಸ್ ಹಾಕಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿಗೆ ಜಾಮೀನು ಮಂಜೂರಾಗಿದೆ.
ಕಡಬವನ್ನು ತಲ್ಲಣಗೊಳಿಸಿದ್ದ ಈ ಪ್ರಕರಣದಲ್ಲಿ ಅಂಗಡಿ ಮಾಲಕನಿಗೆ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಯಫ್.ಸಿ ನ್ಯಾಯಾಲಯ ಪುತ್ತೂರು ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಆರೋಪಿಯ ಪರವಾಗಿ ಕಡಬದ ವಕೀಲ ಮುಸ್ತಾಫಾ ಎಂ. ವಾದಿಸಿದ್ದರು.