ಉಪ್ಪಿನಂಗಡಿ: ಇಲ್ಲಿನ ಹಲವು ಭಾಗದಲ್ಲಿ ಭಾನುವಾರ ಸಂಜೆ ಅಕಾಲಿಕ ಮಳೆ ಸುರಿದಿದ್ದು, ಬಿಸಿಲಿಗೆ ಒಣಗಿಸಲು ಇಟ್ಟ ಅಡಿಕೆ, ರಬ್ಬರ್ ಶೀಟ್ಗಳಿಗೆ ಹಾನಿಯಾಗಿದೆ.
ಸಂಜೆ ಒಮ್ಮಿಂದೊಮ್ಮೆಲೇ ಉಪ್ಪಿನಂಗಡಿ, ಪುಳಿತ್ತಡಿ, ಪೆರಿಯಡ್ಕ, 34 ನೆಕ್ಕಿಲಾಡಿ ಭಾಗಗಳಲ್ಲಿ ಮಳೆ ಸುರಿದಿದ್ದು, ಸುಮಾರು ೧೫ ನಿಮಿಷ ರಸ್ತೆಯಲ್ಲಿ ಮಳೆ ನೀರು ಹರಿದು ಹೋಗುವಷ್ಟು ಸಾಧಾರಣ ಮಳೆಯಾಗಿದೆ. ಒಮ್ಮಿಂದೊಮ್ಮೆಲೆ ಮಳೆ ಬಂದಿದ್ದರಿಂದ ಬಿಸಿಲಿಗೆ ಅಡಿಕೆ, ರಬ್ಬರ್ ಶೀಟ್ಗಳು ಒದ್ದೆಯಾಗಿ ಹಾನಿಯಾಗುವಂತಾಗಿದೆ.