HomePage_Banner
HomePage_Banner
HomePage_Banner
HomePage_Banner

ಬಲ್ನಾಡಿನ ಮದುವೆ ದಿಬ್ಬಣದ ಬಸ್ ಕೇರಳದ ಪಾಣತ್ತೂರು ಸಮೀಪ ಅಪಘಾತ | ಪುತ್ತೂರಿನ 5 ಮಂದಿ ಸಹಿತ ಒಟ್ಟು 7 ಮಂದಿ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಬಲ್ನಾಡ್‌ನ ಚನಿಲದಿಂದ ಕೇರಳದ ಪಾಣತ್ತೂರಿಗೆ ಹೊರಟಿದ್ದ ಮದುವೆ ದಿಬ್ಬಣದ ಬಸ್ ಕಾಸರಗೋಡು ಜಿಲ್ಲೆಯ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿ ಪಲ್ಟಿಯಾಗಿ ಬಸ್‌ನಲ್ಲಿದ್ದ ಪುತ್ತೂರು ತಾಲೂಕಿನ 5 ಮಂದಿ ಸೇರಿದಂತೆ ಒಟ್ಟು 7 ಮಂದಿ ಮೃತಪಟ್ಟ ಘಟನೆ ಜ.3ರಂದು ನಡೆದಿದೆ.

ಬಲ್ನಾಡು ಚನಿಲ ಪಾಲೆಚ್ಚಾರು ಚೋಮ ನಾಯ್ಕರವರ ಪುತ್ರ ರಾಜೇಶ್(38.ವ) ಅವರ ಪುತ್ರ ಆದರ್ಶ(14ವ), ಕುಂಜೂರುಪಂಜ ದೇವಸ್ಯ ನಾರಾಯಣರವರ ಪುತ್ರಿ ಸುಮತಿ(26), ಆರ್ಲಪದವು ಅರ್ಧಮೂಲೆ ನಾರಾಯಣರವರ ಪುತ್ರ ಶ್ರೇಯಸ್(13.ವ), ಸುಳ್ಯ ಸೋಣಂಗೇರಿ ಕುಕ್ಕಂದೂರು ನಾರಾಯಣ ನಾಯ್ಕರವರ ಪುತ್ರ ರವಿಚಂದ್ರ(40.ವ) ಬೆಟ್ಟಂಪಾಡಿ ಗ್ರಾಮದ ಅಜ್ಜಿಕಲ್ಲು ಸಮೀಪದ ಕಳೆಂಜಿಲ ವಸಂತ ನಾಯ್ಕ ಪತ್ನಿ ಸೇಸಮ್ಮ ಯನೆ ಜಯಲಕ್ಷ್ಮೀ, ನಿರ್ವಾಹಕ ಬಂಟ್ವಾಳ ನರಿಕೊಂಬು ಶ್ರೀಧರ ಪೂಜಾರಿಯವರ ಪುತ್ರ ಶಶಿಧರ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಬಲ್ನಾಡು ಗ್ರಾಮದ ಚನಿಲ ಪಾಲೆಚ್ಚಾರು ಕೊಗ್ಗು ನಾಯ್ಕರವರ ಪುತ್ರಿ ಅರುಣಾರವರ ವಿವಾಹವು ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಕುಂಡತ್ತಿಕಾನ ಚೆನ್ನಪ್ಪ ನಾಯ್ಕರವರ ಪುತ್ರ ಪ್ರಶಾಂತ್ ಕುಮಾರ್ ವಿವಾಹವು ಜ.೩ರಂದು ವರನ ಮನೆಯಲ್ಲಿ ನಿಗಧಿಯಾಗಿತ್ತು. ಅದರಂತೆ ವಧುವಿನ ಮನೆಯಿಂದ ಬೆಳಿಗ್ಗೆ ಖಾಸಗಿ ಬಸ್‌ನಲ್ಲಿ ದಿಬ್ಬಣ್ಣ ಹೊರಟ್ಟಿದ್ದ ಬಸ್ ಸುಳ್ಯ-ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಮೂಲಕ ವರನ ಮನೆಗೆ ತೆರೆಳುತ್ತಿದ್ದ ಬಸ್ ಕಾಸರಗೋಡು ಜಿಲ್ಲೆಯ ವೆಲ್ಲಿಕುಂಡು ತಾಲೂಕಿನ ಪಾಣತ್ತೂರು ಸಮೀಪದ ಪರಿಯಾರಂ ಎಂಬಲ್ಲಿರುವ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ವಾಸ್ತವ್ಯವಿಲ್ಲದ ಮನೆಯೊಂದರ ಮೇಲೆ ಉರುಳಿಬಿದ್ದಿದೆ. ಘಟನೆಯಿಂದಾಗಿ ಬಸ್‌ನಲ್ಲಿದ್ದ ೫ ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು ೬೦ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು ಬಸ್‌ನಲ್ಲಿದ್ದ 12 ಮಂದಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಪ ಸ್ವಲ್ಪ ಗಾಯಗೊಂಡವರನ್ನು ಕಾಂಞಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಧು ಹಾಗೂ ಮನೆ ಮಂದಿ ಬೇರೊಂದು ವಾಹನದಲ್ಲಿ ತೆರಳುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ. ಮೃತದೇಹವನ್ನು ಕಾಂಞಂಗಾಡ್ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಳುಹಿಸಿಕೊಡಲಾಗಿದೆ. ಗಾಯಗೊಂಡವರ ಪೈಕಿ ಸುಳ್ಯಪದವು ಪದಡ್ಕ ನಿವಾಸಿ ಶಿವಪ್ಪ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಶ್ವರಮಂಗಳ ಪಡುವನ್ನೂರು ಗ್ರಾಮದ ಮುಗುಳಿ ನಿವಾಸಿ ಯಶೋಧರ ಹಾಗೂ ಅವರ ಪತ್ನಿ ಜಯಲತಾರವರು ಕಾಂಞಂಗಾಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಮದುವೆಗೆ ಹೋದವರು ಮಸಣ ಸೇರಿದರು…!
ಘಟನೆ ನಡೆದ ಸ್ಥಳದಿಂದ ವಿವಾಹ ನಡೆಯಬೇಕಿದ್ದ ವರನ ಮನೆಗೆ ಕೇವಲ ಐದು ಕಿ.ಮೀ ಅಂತರವಿತ್ತು. ಇನ್ನೇನು ಕೆಲವೇ ನಿಮಿಷಗಳಲ್ಲಿ ಮದುವೆ ಮನೆಗೆ ತಲುಪಿ ಮದುವೆಯ ಸಂಭ್ರಮದಲ್ಲಿರಬೇಕಾದವರು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿ ಮಸಣ ಸೇರಿದ್ದಾರೆ. ಮದುವೆ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿಗ ಸ್ಮಶಾನ ಮೌನ ಆವರಿಸಿದೆ.

ಜ.4ರಂದುಅಂತ್ಯಕ್ರಿಯೆ
ಅಪಘಾತದಿಂದ ಮೃತಪಟ್ಟವರ ಪೈಕಿ ನಾಲ್ಕು ಮೃತದೇಹದ ಅಂತ್ಯಕ್ರಿಯೆಯು ಪುತ್ತೂರು ನೆಲ್ಲಿಕಟ್ಟೆಯ ಹಿಂದು ರುದ್ರಭೂಮಿಯಲ್ಲಿ ಜ.೪ರಂದು ಬೆಳಿಗ್ಗೆ  ನಡೆಯಲಿದೆ ಎಂದು ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.